ನವದೆಹಲಿ: ಇದು ನಿಜಕ್ಕೂ ಒಳ್ಳೆಯ ದಿನಗಳ ಭರವಸೆಯನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಒಳ್ಳೆಯ ಸುದ್ದಿ. ನೂತನ ಸಮೀಕ್ಷೆಯೊಂದರ ಪ್ರಕಾರ ಮೋದಿ ಈಗಲೂ ಮಧ್ಯಮ ವರ್ಗದ ಜನರ ಅಚ್ಚುಮೆಚ್ಚಿನ ನಾಯಕ.
ದೇಶದಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ಜೆಎನ್ಯು ಘಟನೆ ಕಾಂಗ್ರೆಸ್ನಿಂದಾದ ಪ್ರಮಾದ ಎಂದು ಶೇ.4ರಷ್ಟು ಮಂದಿ ಅಭಿಪ್ರಾಯಿಸಿದ್ದಾರೆ, ಶೇ.52ರಷ್ಟು ಮಂದಿ ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರಿಯಾದ ಕ್ರಮವನ್ನೇ ತೆಗೆದುಕೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಧ್ಯಮವರ್ಗ, ನಗರ ವೇತನಾಧಾರಿತ ಕುಟುಂಬ ಸೇರಿದಂತೆ ದೇಶದ 7 ಪ್ರಮುಖ ನಗರಗಳಲ್ಲಿ ಮೋದಿಯೇ ಅತೀ ಜನಪ್ರಿಯ ನಾಯಕ ಎಂಬುದಾಗಿ ಸಮೀಕ್ಷೆ ತಿಳಿಸಿದೆ.
ಎನ್ಡಿಎ ಸರ್ಕಾರ ಆರ್ಥಿಕ ಪ್ರದರ್ಶನದ ರೇಟಿಂಗ್ ಶೇ.86ರಷ್ಟಿದೆ, ಶೇ.62ರಷ್ಟು ಜನರು ಮೋದಿ ಸರ್ಕಾರ ಉದ್ಯೋಗ ಸೃಷ್ಟಿಯಲ್ಲಿ ಉತ್ತಮ ಕಾರ್ಯ ಮಾಡಿದ ಎಂದು ನಂಬಿದ್ದಾರೆ.
ಶೇ.52ರಷ್ಟು ಜನರು ಭವಿಷ್ಯದಲ್ಲಿ ಒಳ್ಳೆಯದಾಗಲಿದೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಸಮೀಕ್ಷೆಯ ಒಟ್ಟು ಫಲಿತಾಂಶದ ಪ್ರಕಾರ ಮೋದಿಯವರ ಜನಪ್ರಿಯತೆ ರಾಹುಲ್ ಗಾಂಧಿಗಿಂತ ಅಧಿಕ ಪಟ್ಟು ಹೆಚ್ಚಿದೆ. ಮೋದಿ 7.68ಪಾಯಿಂಟ್ ಪಡೆದರೆ, ರಾಹುಲ್ 3.61 ಪಾಯಿಂಟ್ ಮಾತ್ರ ಪಡೆದಿದ್ದಾರೆ.