ಪಾಟ್ನಾ: ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಸರ್ಕಾರ ಮದ್ಯ ನಿಷೇಧವನ್ನು ಮಾಡಿದೆ, ಎಪ್ರಿಲ್ 1ರಿಂದಲೇ ಅಲ್ಲಿ ದೇಶೀಯ ಮದ್ಯ ಮಾರಾಟ ರದ್ದಾಗಿದೆ. ವಿಶೇಷವೆಂದರೆ ಅಲ್ಲಿನ 243 ಶಾಸಕರು ಕೂಡ ಇನ್ನು ಮುಂದೆ ಮದ್ಯದಿಂದ ದೂರವಿರುವ ಶಪಥ ಮಾಡಿದ್ದಾರೆ.
ಇದೀಗ ಅದೇ ಹಾದಿಯಲ್ಲಿ ಸಾಗಿರುವ ಬಿಹಾರದ ಪೊಲೀಸರು ಕೂಡ ಶರಾಬನ್ನು ಮುಟ್ಟುವುದಿಲ್ಲ ಮತ್ತು ನಿಷೇಧ ಸರಿಯಾದ ರೀತಿಯಲ್ಲಿ ಜಾರಿಗೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಶಪಥ ಮಾಡಿದ್ದಾರೆ. ಈ ಬಗ್ಗೆ ರಾಜ್ಯಾದ್ಯಂತ ಸಾವಿರಾರು ಪೊಲೀಸರು ಸಮವಸ್ತ್ರ ತೊಟ್ಟು ಸಾಲಿನಲ್ಲಿ ನಿಂತು ಪ್ರತಿಜ್ಞಾವಿಧಿಯನ್ನು ತೆಗೆದುಕೊಂಡಿದ್ದಾರೆ.
ಕೆಲವರು ಪೊಲೀಸ್ ಸ್ಟೇಶನ್ ಆವರಣದಲ್ಲಿ ಶಪಥ ಮಾಡಿದರೆ, ಕೆಲವರು ಮೈದಾನದಲ್ಲಿ ಪ್ರತಿಜ್ಞೆಯನ್ನು ಮಾಡಿದರು. ರಾಜಧಾನಿ ಪಾಟ್ನಾದಲ್ಲಿ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಕೆ ಠಾಕೂರ್ ಸಾವಿರಾರು ಪೊಲೀಸರಿಗೆ ಮದ್ಯದಿಂದ ದೂರವಿರುವಂತೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಈಗ ದೇಶಿ ಮದ್ಯವನ್ನು ನಿಷೇಧಿಸಿರುವ ನಿತೀಶ್ ಸರ್ಕಾರ ಮುಂಬರುವ ದಿನಗಳಲ್ಲಿ ಎಲ್ಲಾ ಮದ್ಯಗಳಿಗೂ ನಿಷೇಧ ಹೇರುವುದಾಗಿ ಘೋಷಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.