Sunday, April 3rd, 2016
News13
ಮಂಗಳೂರು : ಶಾರದಾ ವಿದ್ಯಾನಿಕೇತನ ತಲಪಾಡಿಯಲ್ಲಿ ‘ಕಾಮನ ಬಿಲ್ಲಿನ ಹಬ್ಬ’ ಚಿಕ್ಕ ಮಕ್ಕಳ ವಾರ್ಷಿಕೋತ್ಸವವನ್ನು ಆಸ್ವಾಧಿಸುವ ಅಧ್ಯಕ್ಷತೆಯ ಜವಾಬ್ದಾರಿ, ನಿವೃತ್ತ ಅಧ್ಯಾಪಕಿ ಶ್ರೀಮತಿ ಜಯಲಕ್ಷ್ಮಿ ಕಾರಂತ್ರವರ ಹೆಗಲೇರಿತ್ತು. ‘ಹೆತ್ತವರ ಪಾತ್ರ’ ಮಕ್ಕಳ ಬೆಳವಣಿಗೆಯ ಹಂತದಲ್ಲಿ ಹೇಗಿರಬೇಕು ಎಂಬ ವಿಷಯವನ್ನು ಪ್ರಸ್ತಾಪಿಸಿದರು.
ಶ್ರೀಕೃಷ್ಣ, ಬಲರಾಮನ ಆಗಮನದಿಂದ ಆರಂಭಗೊಂಡ ಕಾರ್ಯಕ್ರಮ, ಕೃಷ್ಣನ ಆಂತರ್ಯದ ಮಾತುಗಳೊಂದಿಗೆ ಕೊನೆಗೊಂಡಾಗ, ಸಭಿಕರ ಚಪ್ಪಾಳೆ ಮುಗಿಲೇರಿತ್ತು. ಶಾರದಾ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ಎಂ.ಬಿ.ಪುರಾಣಿಕ್, ಶ್ರೀಮತಿ ಸುನಂದ ಪುರಾಣಿಕ್, ಶಿಕ್ಷಣ ಸಲಹೆಗಾರರಾದ ಡಾ.ಲೀಲಾ ಉಪಾಧ್ಯಾಯ, ಹಾಗೂ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಆಡಳಿತಾಧಿಕಾರಿ, ಶಿಕ್ಷಕರು ಮತ್ತು ಶಿಕ್ಷಕೇತರರ ಬಂಧುಗಳು ಉಪಸ್ಥಿತರಿದ್ದರು.
ಈ ಮಕ್ಕಳ ಕಾಮನ ಬಿಲ್ಲಿನ ಹಬ್ಬಕ್ಕೆ ಅಂದು ರಾತ್ರಿ ವರುಣರಾಯನು ತಲೆಬಾಗಿದ್ದು ಸೋಜಿಗದ ವಿಷಯ.