Friday, April 1st, 2016
Admin
ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಮತ್ತೊಂದು ಸಂಕಷ್ಟದಲ್ಲಿ ಸಿಲುಕಿದ್ದಾರೆ. ತಮ್ಮ ಬಳಿಕ ಹಮ್ಮರ್ ಕಾರನ್ನು ತಪ್ಪಾಗಿ ಸ್ಕಾರ್ಪಿಯೋ ಎಂದು ನೋಂದಾಯಿಸಿಕೊಂಡಿರುವ ಅವರಿಗೆ ರೂ.1.59 ಲಕ್ಷ ದಂಡ ವಿಧಿಸಲಾಗಿದೆ.
ದೋನಿ ಅವರು ಹಮ್ಮರ್ ಎಚ್2 ಕಾರನ್ನು ವಿದೇಶದಿಂದ ಆಮದು ಮಾಡಿಕೊಂಡಿದ್ದು, ಇದರ ಬೆಲೆ 43 ಲಕ್ಷ ರೂಪಾಯಿ. ಇದನ್ನು ದೋನಿ ಅವರು ರಾಂಚಿ ಸಾರಿಗೆ ಇಲಾಖೆಯಲ್ಲಿ 15 ವರ್ಷಗಳ ಕಾಲಕ್ಕೆ ನೋಂದಾವಣೆ ಮಾಡಿಕೊಂಡಿದ್ದರು. ಆದರೆ ಹಮ್ಮರ್ ಬದಲು ಸ್ಕಾರ್ಪಿಯೋ ಎಂದು ನೋಂದಾಯಿಸಿದ್ದರು.
ಇದೀಗ ಅವರಿಗೆ ದಂಡ ವಿಧಿಸಲಾಗಿದೆ. ಹಮ್ಮರ್ ಕಾರನ್ನು ಅವರು ಲೈಫ್ಟೈಮ್ ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕಾದರೆ 1.59 ಲಕ್ಷ ಪಾವತಿ ಮಾಡಬೇಕಾಗುತ್ತದೆ.
ಹಮ್ಮರ್ ಬೆಲೆ ಸ್ಕಾರ್ಪಿಯೋಗಿಂತ 3 ಪಟ್ಟು ಅಧಿಕವಾಗಿದೆ. ಟೈಪಿಕಲ್ ಯೆರರ್ನಿಂದಾಗಿ ದೋನಿಯಿಂದ ಈ ತಪ್ಪಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.