Tuesday, 20th February 2018
×
Home About Us Advertise With s Contact Us

ಕಂಗಣಾ, ಕನ್ನಡದ ಸಂಚಾರಿ ವಿಜಯ್‌ಗೆ ರಾಷ್ಟ್ರೀಯ ಪ್ರಶಸ್ತಿ

kanvijನವದೆಹಲಿ: 62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದೆ. ಭಾರೀ ಪ್ರಶಂಶೆ ಗಿಟ್ಟಿಸಿದ್ದ ಹಿಂದಿಯ ‘ಕ್ವೀನ್’ ಚಿತ್ರ ಉತ್ತಮ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡರೆ, ಅದರಲ್ಲಿನ ನಟನೆಗಾಗಿ ಕಂಗಣಾ ರಣಾವತ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕನ್ನಡದ ಸಂಚಾರಿ ವಿಜಯ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ‘ನಾನು ಅವನಲ್ಲ ಅವಳು’ ಎಂಬ ಚಿತ್ರದಲ್ಲಿನ ನಟನೆಗೆ ಈ ಪ್ರಶಸ್ತಿ ಒಲಿದಿದೆ. ಈ ಚಿತ್ರವನ್ನು ಬಿ.ಎಸ್.ಲಿಂಗದೇವರು ನಿರ್ದೇಶಿಸಿದ್ದಾರೆ.

ಚೊಟುಸ್ಕೋನೆ ಚಿತ್ರದ ನಿರ್ದೇಶನಕ್ಕಾಗಿ ಬಂಗಾಳಿ ನಿರ್ದೇಶಕ ಸೃಜಿತ್ ಮುಖರ್ಜಿ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಅತ್ಯುತ್ತಮ ಸಂಭಾಷಣೆ, ಅತ್ಯುತ್ತಮ ಸಂಗೀತ ನಿರ್ದೇಶನ, ಅತ್ಯುತ್ತಮ ಕೊರಿಯೋಗ್ರಾಫಿ ಮತ್ತು ಅತ್ಯುತ್ತಮ ಕಾಸ್ಟ್ಯೂಮ್ ಪ್ರಶಸ್ತಿ ‘ಹೈದರ್’ ಚಿತ್ರದ ಪಾಲಾಗಿದೆ.

‘ಮೇರಿ ಕೋಮ್’ಗೆ ಜನಪ್ರಿಯ ಚಿತ್ರ ಪ್ರಶಸ್ತಿ ದೊರೆತಿದೆ. ತಮಿಳಿನ ಬಾಬ್ಬಿ ಸಿಂಹ ಮತ್ತು ಹರಿಯಾಣದ ಬಲ್ಜಿಂದರ್ ಕೌರ್‌ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೊರೆತಿದೆ.

ಹೈದರ್ ಚಿತ್ರದಲ್ಲಿನ ಹಾಡಿಗಾಗಿ ಸುಖ್‌ವಿಂದರ್‌ಗೆ ಉತ್ತಮ ಗಾಯಕ ಪ್ರಶಸ್ತಿ ಲಭಿಸಿದೆ.

ಕನ್ನಡದ ‘ಅರಿವು’ ಚಿತ್ರದ ಅತ್ಯುತ್ತಮ ಕನ್ನಡ ಚಿತ್ರ, ಕಿಲ್ಲಾ ಅತ್ಯುತ್ತಮ ಮರಾಠಿ ಚಿತ್ರ, ನಿರ್ಬಷಿತೋ ಅತ್ಯುತ್ತಮ ಬಂಗಾಳಿ ಚಿತ್ರ, ಒಥೆಲ್ಲೋ ಅತ್ಯುತ್ತಮ ಅಸ್ಸಾಮಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಮೇ 3ರಂದು ನವದೆಹಲಿಯ ವಿಗ್ಯಾನ್ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಶಶಿ ಕಪೂರ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನೂ ಇದೇ ಸಮಾರಂಭದಲ್ಲಿ ನೀಡಲಾಗುತ್ತದೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top