×
Home About Us Advertise With s Contact Us

ಸಿಂಗಾಪುರದ ಸಂಸ್ಥಾಪಕ ಪಿತಾಮಹನ ಅಂತ್ಯಸಂಸ್ಕಾರಕ್ಕೆ ಮೋದಿ

leeನವದೆಹಲಿ: ಸೋಮವಾರ ಬೆಳಿಗ್ಗೆ ಮೃತಪಟ್ಟ ಸಿಂಗಾಪುರದ ಸಂಸ್ಥಾಪಕ ಪಿತಾಮಹ ಲೀ ಕೌನ್ ಯ್ಯೂ ಅವರ ಅಂತ್ಯಸಂಸ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

ಮಾ.29ರಂದು ಲೀ ಅವರ ಅಂತ್ಯಸಂಸ್ಕಾರ ನಡೆಯಲಿದ್ದು ಇದರಲ್ಲಿ ಮೋದಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ವಕ್ತಾರ ಸೈಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.

‘ಲೀ ಒಬ್ಬ ದೂರದೃಷ್ಟಿ ಹೊಂದಿದ್ದ ಮುತ್ಸದ್ಧಿ, ನಾಯಕರುಗಳಲ್ಲಿ ಸಿಂಹ, ಪ್ರತಿಯೊಬ್ಬರಿಗೂ ಮೌಲ್ಯಯುತ ಪಾಠ ಕಲಿಸಿದ್ದಾರೆ. ಅವರ ಸಾವು ನೋವು ತಂದಿದೆ’ ಎಂದು ಮೋದಿ ಲೀ ನಿಧನದ ದಿನ ಟ್ವಿಟ್ ಮಾಡಿದ್ದರು.

ಲೀ ಸಿಂಗಾಪುರದ ಮೊದಲ ಪ್ರಧಾನಿ ಹಾಗೂ ಅದರ ಸಂಸ್ಥಾಪಕ ಪಿತಾಮಹ ಎಂದೇ ಖ್ಯಾತರಾದವರು.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top