×
Home About Us Advertise With s Contact Us

ದೆಹಲಿ ಗ್ಯಾಂಗ್‌ರೇಪ್ ಆರೋಪಿಗಳ ಪರ ವಕೀಲರಿಗೆ ನೋಟಿಸ್

nirbhayaನವದೆಹಲಿ: 2012ರ ದೆಹಲಿ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಬಗೆಗಿನ ಸಾಕ್ಷ್ಯಚಿತ್ರ ‘ಇಂಡಿಯಾಸ್ ಡಾಟರ್’ನಲ್ಲಿ ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ನಿರ್ಭಯಾ ಅತ್ಯಾಚಾರಿ ಆರೋಪಿಗಳ ಪರ ಇಬ್ಬರು ವಕೀಲರಿಗೆ ಸುಪ್ರೀಂಕೋರ್ಟ್ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.

ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಜಾಗವಿಲ್ಲ, ರೇಪ್ ನಡೆಯಲು ಮಹಿಳೆಯರೇ ಪ್ರಮುಖವಾಗಿ ಕಾರಣರಾಗಿರುತ್ತಾರೆ ಎಂಬಿತ್ಯಾದಿ ಹೇಳಿಕೆಯನ್ನು ಇವರು ಸಾಕ್ಷ್ಯಚಿತ್ರದಲ್ಲಿ ನೀಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೋರಿ ಸುಪ್ರೀಂ ಇವರಿಗೆ ನೋಟಿಸ್ ನೀಡಿದೆ.

ವಕೀಲರಾದ ಎಕೆ ಸಿಂಗ್ ಮತ್ತು ಎಂಎಲ್ ಶರ್ಮರಿಗೆ ನೋಟಿಸ್ ನೀಡಲಾಗಿದೆ. ಇವರು ನಿರ್ಭಯಾ ಅತ್ಯಾಚಾರ ಪ್ರಕರಣ ಆರೋಪಿಗಳ ಡಿಫೆನ್ಸ್ ಲಾಯರ್‍ಸ್ ಆಗಿದ್ದಾರೆ.

ಸಾಕ್ಷ್ಯಚಿತ್ರದಲ್ಲಿ ಇವರು ನೀಡಿದ ಹೇಳಿಕೆಗೆ ದೇಶಾದ್ಯಂತ ಭಾರೀ ಖಂಡನೆ ವ್ಯಕ್ತವಾಗಿತ್ತು.
ಇವರ ಹೇಳಿಕೆ ಅಮಾನವೀಯ, ಅಸಮರ್ಥನೀಯ ಮತ್ತು ಮಹಿಳೆಯಲ್ಲಿ ಅಸುರಕ್ಷ ಮತ್ತು ಭಯದ ವಾತಾವರಣವನ್ನು ಸೃಷ್ಟಿಸುವಂತದ್ದು ಎಂದು ಆರೋಪಿಸಿ ಮಹಿಳಾ ವಕೀಲರ ಅಸೋಸಿಯೇಶನ್ ಸುಪ್ರೀಂಗೆ ಪಿಟಿಷನ್ ಸಲ್ಲಿಸಿತ್ತು.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top