ನವದೆಹಲಿ: ಭಾರತದಲ್ಲಿ ಸುಮಾರು 130 ಸ್ಟಾರ್ಟ್-ಅಪ್ ಕಂಪೆನಿಗಳಿಂದ 700 ಮಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಮುಂದಿನ 12 ತಿಂಗಳಿನಲ್ಲಿ 5,000 ಉದ್ಯೋಗ ರಚನೆಯಾಗುವ ನಿರೀಕ್ಷೆ ಇದೆ ಎಂದು ಇನ್ನೋವೆನ್ ಕ್ಯಾಪಿಟಲ್ (InnoVen Capital) ವರದಿ ತಿಳಿಸಿದೆ.
ಸ್ನ್ಯಾಪ್ಡೀಲ್, ಫ್ರೀಚಾರ್ಜ್, ಮಿಂತ್ರಾ, ಪೆಪ್ಪೆರ್ ಟ್ಯಾಪ್, ಫಾಸೊಸ್, ಮಂಥನ್ ಸಿಸ್ಟಮ್ಸ್ ಮುಂತಾದ ಕಂಪೆನಿಗಳು ಸೇರಿದಂತೆ ಒಟ್ಟು 70 ಕಂಪೆನಿಗಳಿಗೆ ಇನ್ನೋವೆನ್ ಕ್ಯಾಪಿಟಲ್ ಇಂಡಿಯಾ ಸುಮಾರು 100ರಷ್ಟು ಸಾಲವನ್ನು ನೀಡಿದೆ.
ಕೈಗಾರಿಕೋದ್ಯಮ ವಿಶ್ಲೇಷಣೆ ಪ್ರಕಾರ ಆನ್ಲೈನ್ ಗ್ರಾಹಕ ಇಂಟರ್ನೆಟ್ ಮತ್ತು ಇ-ಕಾಮರ್ಸ್ ಕ್ಷೇತ್ರಗಳು ನೇಮಕ ದೃಷ್ಟಿಕೋನದಿಂದ ಅತ್ಯಂತ ಜನಪ್ರಿಯ ವಿಭಾಗವಾಗಿದೆ ಎನ್ನಲಾಗಿದೆ. ಶೇ.97 ಸ್ಟಾರ್ಟ್-ಟಪ್ಗಳು ಹೊಸ ಸಿಬ್ಬಂದಿಗಳನ್ನು ನೇಮಕಾತಿ ಮಾಡಲಿದ್ದು, ತಂತ್ರಜ್ಞಾನ ವಿಭಾಗದಲ್ಲಿ ಶೇ.28 ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.