News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶಾಲೆಗಳಲ್ಲಿ ಯೋಗ ಕಡ್ಡಾಯಕ್ಕೆ ಮುಸ್ಲಿಂ ಬೋರ್ಡ್ ವಿರೋಧ

yogaಜೈಪುರ: ಶಾಲೆಗಳಲ್ಲಿ ಯೋಗ ಮತ್ತು ಸೂರ್ಯ ನಮಸ್ಕಾರವನ್ನು ಕಡ್ಡಾಯಗೊಳಿಸಿರುವ ರಾಜಸ್ಥಾನ ಸರ್ಕಾರದ ಕ್ರಮವನ್ನು ಮುಸ್ಲಿಂ ಸಂಘಟನೆಗಳು ವಿರೋಧಿಸಿವೆ.

‘ಇದು ಇಸ್ಲಾಂ ವಿರೋಧಿ ಕಾರ್ಯ, ಇದನ್ನು ತಕ್ಷಣ ಸರ್ಕಾರ ವಾಪಾಸ್ ಪಡೆಯಬೇಕು. ಇಸ್ಲಾಂನಲ್ಲಿ ಇಂತಹುದಕ್ಕೆಲ್ಲಾ ಅವಕಾಶ ಇಲ್ಲ. ಮುಸ್ಲಿಮರ ಮೇಲೆ ಇದನ್ನು ಹೇರುವುದು ತಪ್ಪು’  ಎಂದು ಆಲ್ ಇಂಡಿಯಾ ಮುಸ್ಲಿಂ ಪಸರ್ನಲ್ ಲಾ ಬೋರ್ಡ್ ಹೇಳಿದೆ.

‘ದೇಶದ ಶಾಂತಿ ಮತ್ತು ಪ್ರಗತಿಗೆ ಆಂತರಿಕ ಸ್ಥಿರತೆ ಅತ್ಯವಶ್ಯಕ. ಇದನ್ನು ರಾಜ್ಯ ಮತ್ತು ಕೇಂದ್ರಗಳು ಅರಿತು ಮುನ್ನಡೆಯಬೇಕೇ ಹೊರತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕಾರ್ಯಗಳನ್ನು ಘೋಷಿಸುವುದಲ್ಲ’ ಎಂದಿದೆ.

ಅಲ್ಲದೇ ಶಾಲಾ ಪಠ್ಯಗಳಲ್ಲಿ ಧಾರ್ಮಿಕ ಬೋಧನೆಗಳನ್ನು ಅಳವಡಿಸುವುದಕ್ಕೂ ಅದು ವಿರೋಧ ವ್ಯಕ್ತಪಡಿಸಿದೆ.

ಒಟ್ಟಿನಲ್ಲಿ ವಿದ್ಯಾರ್ಥಿಗಳ ಮಾಸಿಕ ಮತ್ತು ದೈಹಿಕ ಸ್ವಾಸ್ಥ್ಯಕ್ಕಾಗಿ ಘೋಷಿಸಿರುವ ಯೋಗ ಯೋಜನೆ ಇದೀಗ ಧಾರ್ಮಿಕ ಬಣ್ಣ ಪಡೆಯುತ್ತಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top