ನವದೆಹಲಿ: ಜಗತ್ತಿನಾದ್ಯಂತ ಗ್ರಾಹಕರಿಗೆ ನವೀನ ಉತ್ಪನ್ನಗಳು ಮತ್ತು ಸೇವೆಗಳನ್ನು ತರಲು 8 ಜಾಗತಿಕ ಕಂಪೆನಿಗಳೊಂದಿಗೆ ರಿಲಯನ್ಸ್ ಜಿಯೊ ಇನ್ಫೋಕಾಂ ಒಪ್ಪಂದ ಮಾಡಿಕೊಂಡಿದೆ.
ಬ್ರಿಟಿಷ್ ಟೆಲಿಕಾಂ (British Telecom), ಡಚ್ ಟೆಲಿಕಾಂ (Deutsche Telekom), ಮಿಲ್ಲಿಕಾಂ (Millicom), ಎಂಟಿಎಸ್ (MTS), ಆರೆಂಜ್ (Orange), ರೋಜರ್ಸ್ (Rogers), ಟೆಲಿಯಾಸೊನೇರಾ (TeliaSonera) ಮತ್ತು ಟಿಐಎಂ(TIM) ಈ ಎಂಟು ಕಂಪೆನಿಗಳಾಗಿವೆ.
ಪ್ರತೀ ಭಾರತೀಯ ಸಕ್ರಿಯವಾಗಿ ಡಿಜಿಟಲ್ ಜೀವನ ನಡೆಸಲು ಸಹಕರಿಸಲು ಜಿಯೊ ಮುಂದಾಗಿದೆ. ಇದಕ್ಕಾಗಿ ಜಾಗತಿಕವಾಗಿ ಬೃಹತ್ ಗ್ರೀನ್ಫೀಲ್ಡ್ 4G ಮತ್ತು ಫೈಬರ್ ನೆಟ್ವರ್ಕ್ ನಿರ್ಮಿಸಲಾಗಿದೆ. ಅಲ್ಲದೇ ಮನೋರಂಜನೆ, ಕ್ಲೌಡ್, ಪೇಮೆಂಟ್ ಮತ್ತಿತರ ಸೌಲಭ್ಯಗಳ ಡಿಜಿಟಲ್ ಸೇವೆಗಳನ್ನು ಆರಂಭಿಸಿದೆ ಎಂದು ರಿಲಯನ್ಸ್ ಜಿಯೊದ ಮುಖ್ಯ ಉತ್ಪನ್ನ ಮತ್ತು ನಾವೀನ್ಯತೆ ಅಧಿಕಾರಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.