ಮುಂಬಯಿ: ಅಮೇರಿಕಾದಲ್ಲಿ ಜಾರಿಯಲ್ಲಿರುವ ’ಇನ್ಫಿ ಮೇಕರ್ ಅವಾರ್ಡ್’ ಪ್ರಶಸ್ತಿಯನ್ನು ಭಾರತದಲ್ಲೂ ಜಾರಿಗೊಳಿಸಲು ಇನ್ಫೋಸಿಸ್ ನಿರ್ಧರಿಸಿದೆ. ಅದರಂತೆ ಜಗತ್ತಿನಾದ್ಯಂತ ಜನರ ಯಾವುದೇ ಸಮಸ್ಯೆ, ದುಃಖ, ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ನೀಡಿ ಬಗೆಹರಿಸಿದಲ್ಲಿ ಆತನಿಗೆ 5 ಲಕ್ಷ ರೂ.ಗಳ ಪ್ರಶಸ್ತಿ ದೊರೆಯಲಿದೆ.
ಇನ್ಫಿ ಮೇಕರ್ ವಾರ್ಷಿಕ ಪ್ರಶಸ್ತಿಯಾಗಿದ್ದು, ಒಟ್ಟು 1 ಕೋಟಿ ಮೊತ್ತದ 20 ಪ್ರಶಸ್ತಿಗಳನ್ನು ನೀಡಲಾಗುವುದು. ಪ್ರಶಸ್ತಿಗೆ ಅರ್ಹರಾದ 20 ಮಂದಿ ತಲಾ 5 ಲಕ್ಷ ಬಹುಮಾನ ಪಡೆಯಲಿದ್ದಾರೆ ಎಂದು ಕಂಪೆನಿಯ ಕಾರ್ಯಾಚರಣೆ ಅಧಿಕಾರಿ ಪ್ರವೀಣ್ ರಾವ್ ತಿಳಿಸಿದ್ದಾರೆ.
ಮೊದಲ ಹಂತದ ಅವಧಿ 2016ರ ಮಾರ್ಚ್ 1ರಿಂದ ಎಪ್ರಿಲ್ 15ರ ವರೆಗೆ ನಡೆಯಲಿದ್ದು, ಒಬ್ಬ ವ್ಯಕ್ತಿ ಅಥವಾ 2-7 ಮಂದಿಯ ತಂಡ ಒಂದು ಬಾರಿಗೆ ಅರ್ಜಿ ಸಲ್ಲಿಸಹುದಾಗಿದೆ. ತಂತ್ರಜ್ಞಾನ, ಅಕಾಡೆಮಿಕ್ ಮತ್ತು ಸಮುದಾಯ ತಜ್ಞರ ಆಯ್ಕೆ ಸಮಿತಿ ವಿಜೇತರನ್ನು ನಿರ್ಧರಿಸಲಿದೆ. 18 ವರ್ಷಕ್ಕೂ ಮೇಲ್ಪಟ್ಟ ಭಾರತೀಯರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
60ರಿಂದ 90 ನಿಮಿಷಗಳ ವೀಡಿಯೋ ಮೂಲಕ ತಮ್ಮ ಪರಿಕಲ್ಪನೆಯನ್ನು ಮಂಡಿಸಬೇಕಿದ್ದು, ಇಂಗ್ಲಿಷ್ ಭಾಷೆಯ ಒರಿಜಿನಲ್ ವೀಡಿಯೋ ಆಗಿರಬೇಕು ಎಂದು ಕಂಪೆನಿ ತಿಳಿಸಿದೆ.
ಅತ್ಯಾಧುನಿಕ ಪರಿಕಲ್ಪನೆ ಮತ್ತು ಯೋಜನೆಗಳೊಂದಿಗೆ ಸಮಸ್ಯೆಗಳನ್ನು ಬಗೆಹರಿಸಲು ಜನರನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಪ್ರವೀಣ್ ರಾವ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.