ಮುಂಬಯಿ: ಗುಜರಾತ್ನಲ್ಲಿ ಜೂನ್ 2004ರಲ್ಲಿ ನಡೆದ ಎನ್ಕೌಂಟರ್ನಲ್ಲಿ ಹತ್ಯೆಯಾಗಿದ್ದ ಇಶ್ರತ್ ಜಹಾನ್(19) ಉಗ್ರ ಸಂಘಟನೆ ಲಷ್ಕರ್ -ಎ-ತೋಯ್ಬಾ ಇದರ ಮಾನವ ಬಾಂಬರ್ ಆಗಿದ್ದಳು ಎಂದು ಪಾಕ್ ಮೂಲದ ಉಗ್ರ ಡೇವಿಡ್ ಹೆಡ್ಲಿ ಮಾಹಿತಿ ಬಹಿರಂಗಪಡಿಸಿದ್ದಾರೆ.
ಇಶ್ರತ್ ಜಹಾನ್ ಲಷ್ಕರ್-ಎ- ತೋಯ್ಬಾ ಸದಸ್ಯೆಯಾಗಿದ್ದಳು. 2004ರ ಜೂನ್ 15ರಂದು ನಡೆದ ಅಹಮದಾಬಾದ್ ಪೊಲೀಸ್ ಎನ್ಕೌಂಟರ್ನಲ್ಲಿ ಇಶ್ರತ್ ಜಹಾನ್ ಮತ್ತು ಆಕೆಯ ಜೊತೆಗಿದ್ದ ಜಿಶನ್ ಜೋಹರ್, ಅಮ್ಜಾದ್ ಅಲಿ ರಾಣಾ ಹಾಗೂ ಪ್ರಾಣೇಶ್ ಪಿಲೈ ಎಂಬವರ ಹತ್ಯೆಗೈದಿದ್ದರು.
ಲಷ್ಕರ್-ಎ-ತೋಯ್ಬಾ ಜೊತೆ ನಿಕಟ ಸಂಪರ್ಕ ಹೊಂದಿದ್ದ ಇಶ್ರತ್ ಜಹಾನ್ ಚಟುವಟಿಕೆ ಕುರಿತು ಲಷ್ಕರ್ ಮುಖ್ಯಸ್ಥ ಝಾಕಿ ಉರ್ ರೆಹ್ಮಾನ್ ಲಖ್ವಿ ತನಗೆ ಹೇಳಿರುವುದಾಗಿ ಡೇವಿಡ್ ಹೆಡ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮುಂಬಯಿ ಕೋರ್ಟ್ ವಿಚಾರಣೆ ವೇಳೆ ಹೇಳಿದ್ದಾನೆ.
ಎನ್ಕೌಂಟರ್ನಲ್ಲಿ ಹತರಾದ ಈ ಉಗ್ರ ಸಂಘಟನೆ ಸದಸ್ಯರು ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಕಾರಣಕ್ಕೆ ಅವರನ್ನು ಪೊಲೀಸರು ಎನ್ಕೌಂಟರ್ ನಡೆಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.