ನವದೆಹಲಿ: ಕಡಲು ಪ್ರದೇಶದಲ್ಲಿ ಕಣ್ಣಗಾವಲು, ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಕಡಲು ರಕ್ಷಣಾ ಪಡೆ, 2020ರ ಒಳಗಾಗಿ 38 ವಿಮಾನಗಳು ಮತ್ತು ಹೆಲಿಕಾಪ್ಟರ್ಗಳನ್ನು ತನ್ನ ನೌಕಾಬಲದಲ್ಲಿ ಸೇರ್ಪಡೆಗೊಳಿಸಿಕೊಳ್ಳುವ ಪ್ರಸ್ತಾವವಿದೆ.
ಈ ವಿಸ್ತರಣಾ ಯೋಜನೆಯ ಫಲವಾಗಿ ಕಡಲ ಭದ್ರತಾ ಪಡೆಗಳಿಗೆ ಅತ್ಯಾಧುನಿಕ ಹಗುರ ಹೆಲಿಕಾಪ್ಟರ್ (ಎಎಲ್ ಎಚ್) ಅವಳಿ ಎಂಜಿನ್ ಹೆಲಿಕಾಪ್ಟರ್ ಮತ್ತು ಕಡಲ ಬಹು ಉದ್ದೇಶೀಯ ಕಣ್ಗಾವಲು ವಿಮಾನ (ಎಂಎಸ್ಎ) ಗಳ ಸೇರ್ಪಡೆಯಾಗಲಿದೆ. ಪ್ರಸ್ತುತ ಕಡಲು ರಕ್ಷಣಾ ಪಡೆಯ ಬಳಿ 62 ವಿಮಾನ ಮತ್ತು ಹೆಲಿಕಾಪ್ಟರ್ಗಳ ಪಡೆಯನ್ನು ಹೊಂದಿದೆ.
16 ಅತ್ಯಾಧುನಿಕ ಹಗುರ ಹೆಲಿಕಾಪ್ಟರ್ಗಳನ್ನು ಸರಬರಾಜು ಮಾಡಲು ಹಿಂದುಸ್ಥಾನ್ ಎರೋನಾಟಿಕ್ಸ್ ಲಿಮಿಟೆಡ್ ಜೊತೆಯಲ್ಲಿ ಮುಂದಿನ 3-4 ತಿಂಗಳ ಅವಧಿಯಲ್ಲಿ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಜೊತೆಯಲ್ಲಿ 14 ಅವಳಿ ಇಂಜಿನ ಹೊಂದಿರುವ ಭಾರೀ ಹೆಲಿಕಾಪ್ಟರ್ಗಳನ್ನು ಖರೀದಿಸುವ ಸಾಧ್ಯತೆಗಳ ಬಗ್ಗೆ ಕೂಡ ಪರಿಶೀಲಿಸಲಾಗುತ್ತಿದೆ. ಹಾಗೆಯೇ ಏರಬಸ್ ಯ್ಯೂರೋಕಾಪ್ಟರ್ ಖರೀದಿ ಬಗ್ಗೆಯೂ ಚಿಂತನೆ ನಡೆದಿದ್ದು, ಈ ಬಗ್ಗೆ ಪ್ರಸ್ತಾವನೆ ರಕ್ಷಣಾ ಸಚಿವಾಲಯದಲ್ಲಿದ್ದು ಪ್ರಸ್ತಾಪನೆ ಕಾರ್ಯಗತಗೊಳ್ಳಲು ಒಂದೆರಡು ವರ್ಷ ಸಮಯ ಬೇಕಾಗಬಹುದಾಗಿದೆ.
ಅವಳಿ ಇಂಜಿನ್ ಹೊಂದಿರುವ ಹೆಲಿಕಾಪ್ಟರ್ಗಳ ಮೂಲಕ ಸಮುದ್ರದಲ್ಲಿ ದೂರದ ಯಾನ ಸಾಧ್ಯ. ವಿಮಾನಗಳನ್ನು ಉಪಯೋಗಿಸಲು ಏರಸ್ಟ್ರಿಪ್ ಹೊಂದಿರದ ಪ್ರದೇಶಗಳಲ್ಲಿ ಇವು ಹೆಚ್ಚು ಉಪಯುಕ್ತವಾಗಲಿವೆ ಎಂಬುದು ಹಿರಿಯ ಅಧಿಕಾರಿಗಳ ಅಭಿಪ್ರಾಯ.
ವಿಮಾನ ಹಾಗೂ ಹೆಲಿಕಾಪ್ಟರ್ಗಳ ವಾಯುಬಲ ಕಡಲು ರಕ್ಷಣಾ ಪಡೆಗಳ ಕಾರ್ಯಾಚರಣೆಗಳಲ್ಲಿ ಬಹಳ ಮಹತ್ವದ ಪಾತ್ರ ಹೊಂದಿದ್ದು, ಡಿಸೆಂಬರ್ 31, 2014 ರಂದು ಗುಜರಾತನ ಕಡಲಿನಲ್ಲಿ ಸ್ಫೋಟಗೊಂಡ ಪಾಕಿಸ್ಥಾನದ ಹಡುಗು ಪತ್ತೆ ಹಾಗು ಕಾರ್ಯಾಚರಣೆಯಲ್ಲಿ ಕಡಲು ಪಡೆಯ ನೌಕಾ ಹಾಗೂ ವಾಯು ಬಲ ಜಂಟಿಯಾಗಿ ಕಾರ್ಯಚರಣೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.