News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರವಿ ಪ್ರಕರಣ ಸಿಬಿಐಗೆ: ಜನರಿಗೆ ಸಂದ ಜಯ ಎಂದ ಯಡಿಯೂರಪ್ಪ

IMG-20150321-WA0015 copyಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ ರವಿಯವರ ಸಂಶಯಾಸ್ಪದ ಸಾವಿನ ತನಿಖೆಯನ್ನು ಕೊನೆಗೂ ರಾಜ್ಯ ಸರಕಾರ ಸಿ.ಬಿ.ಐ.ಗೆ ಒಪ್ಪಿಸಿರುವುದರಿಂದ ಸಾರ್ವಜನಿಕರ, ರವಿ ಕುಟುಂಬದವರ, ಅಧಿಕಾರಿಗಳ ಬೇಡಿಕೆಗೆ ಪ್ರಥಮ ಹಂತದ ಜಯ ಸಿಕ್ಕಿದಂತಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.

ಅಲ್ಲದೇ ಅವರು ಸಿ.ಬಿ.ಐ. ತನಿಖೆಗೆ ರಾಜ್ಯ ಸರಕಾರ ಹಾಗೂ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು. ಆ ಮೂಲಕ ಡಿ.ಕೆ.ರವಿ ಅವರ ಸಾವಿಗೆ ನ್ಯಾಯ ದೊರಕುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿ.ಕೆ. ರವಿಯವರ ಪ್ರಕರಣವನ್ನು ವಿಪಕ್ಷಗಳು ರಾಜಕೀಯವಾಗಿ ಬಳಸಿಕೊಂಡಿವೆ ಎಂದು ಸದನದಲ್ಲಿ ಹೇಳಿರುವುದು ನಾಚಿಗೆಗೇಡಿನ ವಿಷಯ, ಅವರು ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದರು.

ಅಲ್ಲದೆ ಸಿ.ಬಿ.ಐ ಈ ಪ್ರಕರಣದ ಸತ್ಯಾಂಶವನ್ನು ಅರಿತು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯ ಸಾವಿಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top