×
Home About Us Advertise With s Contact Us

ಬಿರಿಯಾನಿ ಹೇಳಿಕೆಗೆ ಸ್ಪಷ್ಟನೆ ನೀಡುವಂತೆ ನಿಕ್ಕಂಗೆ ಸೂಚನೆ

nikkamಮುಂಬಯಿ: 26/11 ಮುಂಬಯಿ ದಾಳಿಕೋರ ಕಸಬ್ ಎಂದೂ ಬಿರಿಯಾನಿ ಕೇಳಿರಲಿಲ್ಲ. ನಾನೇ ಆ ಸುದ್ದಿಯನ್ನು ಸೃಷ್ಟಿಸಿದೆ ಎಂದು ಹೇಳಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಂ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಮಹಾರಾಷ್ಟ್ರ ಸರ್ಕಾರ ಸೂಚಿಸಿದೆ.

‘ನಿಕ್ಕಂ ಈ ರೀತಿ ಹೇಳಿರುವುದು ದುರಾದೃಷ್ಟ. ಮುಖ್ಯಮಂತ್ರಿಯ ಬಳಿ ಮಾತನಾಡಿದ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ನಿಕ್ಕಂಗೆ ಸೂಚಿಸಿದ್ದೇನೆ’ ಎಂದು ಸಚಿವ ಏಕನಾಥ್ ಖಡ್ಸೆ ತಿಳಿಸಿದ್ದಾರೆ.

ವಿಚಾರಣೆಯ ಸಂದರ್ಭ ಕಸಬ್ ಪರವಾಗಿ ಎದ್ದಿದ್ದ ಭಾವನಾತ್ಮಕ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಆತ ಬಿರಿಯಾನಿ ಕೇಳಿದ್ದಾನೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿದೆ ಎಂದು ನಿಕ್ಕಂ ಇತ್ತೀಚಿಗೆ ಹೇಳಿದ್ದರು.

ಕಸಬ್ ಪರ ವಕೀಲರಾಗಿದ್ದ ಅಬ್ಬಾಸ್ ಖಜ್ಮಿ ಇದನ್ನು ತೀವ್ರವಾಗಿ ಖಂಡಿಸಿದ್ದು, ’ನಿಕ್ಕಂ ಕೇವಲ ಮಾಧ್ಯಮಗಳನ್ನು ದುರುಪಯೋಗಪಡಿಸಿಕೊಂಡಿಲ್ಲ, ಬದಲಾಗಿ ನ್ಯಾಯಾಲಯ ದಾರಿ ತಪ್ಪಿಸಿದರು’ ಎಂದು ಆರೋಪಿಸಿದ್ದಾರೆ.

ದೇಶದ ಖ್ಯಾತ ವಕೀಲರಾಗಿರುವ ನಿಕ್ಕಂ ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಪ್ರಕರಣ, ಚಿತ್ರ ನಿರ್ಮಾಪಕ ಗುಲ್ಶನ್ ಕುಮಾರ್ ಪ್ರಕರಣ, ಮುಂಬಯಿ ದಾಳಿ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳನ್ನು ನಿಭಾಯಿಸಿದ್ದಾರೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top