×
Home About Us Advertise With s Contact Us

ಮೋದಿಯಿಂದ ಭಗತ್, ರಾಜ್‌ಗುರ್, ಸುಖ್‌ದೇವ್‌ಗೆ ನಮನ

bhagatನವದೆಹಲಿ: ಪಂಜಾಬ್‌ನ ಹುಸೈನಿವಾಲಾಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ಹುತಾತ್ಮ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖ್‌ದೇವ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಮೂವರು ಮಹಾನ್ ದೇಶಭಕ್ತರ ಅಂತಿಮ ಸಂಸ್ಕಾರವನ್ನು ಮಾ.23, 1931ರಂದು ಹುಸೈನಿವಾಲಾದಲ್ಲಿ ನಡೆಸಲಾಗಿತ್ತು. ಈ ದಿನವನ್ನು ಪ್ರತಿವರ್ಷ ದೇಶದಲ್ಲಿ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತದೆ.

ರಾಜೀವ್ ಗಾಂಧಿಯವರ ಬಳಿಕ ಇಲ್ಲಿಗೆ ಆಗಮಿಸುತ್ತಿರುವ ಎರಡನೇ ಪ್ರಧಾನಿ ಮೋದಿ. 1985ರ ಮಾರ್ಚ್‌ನಲ್ಲಿ ರಾಜೀವ್ ಹುಸೈನಿವಾಲಾಗೆ ಆಗಮಿಸಿದ್ದರು.

ಇಂದು ಮೋದಿ ಜಲಿಯನ್‌ವಾಲಾಭಾಗ್‌ಗೂ ತೆರಳಲಿದ್ದಾರೆ. ಇಲ್ಲಿ 1919ರ ಎಪ್ರಿಲ್ 13ರಂದು ಬ್ರಿಟಿಷರು ನೂರಾರು ಭಾರತೀಯರನ್ನು ಕೊಂದು ಹಾಕಿದ್ದರು.

ಸಿಖ್ಖರ ಪವಿತ್ರ ಸ್ಥಳ ಗೋಲ್ಡನ್ ಟೆಂಪಲ್‌ಗೂ ಅವರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

Tags:

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top