ನವದೆಹಲಿ: ಇಡೀ ಜಗತ್ತಿಗೆ ಇದೊಂದು ಅತ್ಯಂತ ಸಿಹಿ ಸುದ್ದಿ! ಇದೇ ಮೊದಲ ಬಾರಿಗೆ ಶೂನ್ಯ ಗುರುತ್ವಾಕರ್ಷಣೆ ಇರುವ ಬಾಹ್ಯಾಕಾಶದಲ್ಲಿ ಹೂವೊಂದು ಅರಳಿದೆ.
ಅಮೆರಿಕದ ಗಗನಯಾತ್ರಿ ಸ್ಕಾಟ್ ಕೆಲ್ಲೆ ಅವರು ಈ ಐತಿಹಾಸಿಕ ಯಶಸ್ಸನ್ನು ಟ್ವಿಟರ್ ಮೂಲಕ ಘೋಷಿಸಿದ್ದಾರೆ ಮತ್ತು ಆರೇಂಜ್ ಬಣ್ಣದ 13 ಎಸಳುಗಳನ್ನೊಳಗೊಂಡ ಆ ಸುಂದರ ಹೂವಿನ ಅದ್ಭುತ ಚಿತ್ರವನ್ನು ಹಂಚಿಕೊಂಡಿದ್ದಾರೆ.
ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ರೊಮೈನ್ ಲೆಟ್ಟುಸ್ ಮತ್ತು ಅರುಗುಲದಂತಹ ಹಲವಾರು ಗಿಡಗಳನ್ನು ನೆಟ್ಟಿದ್ದರೂ, ಝಿನ್ನಿಯಾಸ್ ಹೂ ಬಿಟ್ಟ ಮೊದಲ ಗಿಡವಾಗಿದೆ. ಇದರಿಂದಾಗಿ ಬಾಹ್ಯಾಕಾಶದಲ್ಲಿ ಗಿಡ ಮರಗಳನ್ನು ನೆಡುವ ವಿಜ್ಞಾನಿಗಳ ಕನಸು ಚಿಗುರಿದೆ.
ಶೂನ್ಯ ಗುರುತ್ವಾಕರ್ಷಣೆಯಲ್ಲೂ ಗಿಡಗಳು ಯಾವ ರೀತಿ ಬೆಳೆಯುತ್ತವೆ ಎಂಬುದನ್ನು ತಿಳಿದುಕೊಳ್ಳಲು ಪ್ರಯೋಗಾರ್ಥವಾಗಿ ಈ ಗಿಡವನ್ನು ಬೆಳೆಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.