ನವದೆಹಲಿ: ವಿಶ್ವದ ಅತಿ ದೊಡ್ಡ ಸಾಮಾಜಿಕ ಜಾಲತಾಣ ಫೇಸ್ಬುಕ್ ಫೆಬ್ರವರಿ 4ರಂದು 12ನೇ ವರ್ಷಕ್ಕೆ ಕಾಲಿಡಲಿದೆ. ಈ ದಿನ ಜ.2004ರಲ್ಲಿ ಸೈಟ್ನಲ್ಲಿ ಮೊದಲ ಕೋಡ್ ಬರೆಯುವ ಮೂಲಕ ಫೇಸ್ಬುಕ್ ಜರ್ನಿ ಆರಂಭವಾದ ಬಗ್ಗೆ ಝಕರ್ಬರ್ಗ್ ಸ್ಮರಿಸಿಕೊಂಡಿದ್ದಾರೆ.
ಝುಕರ್ಬರ್ಗ್ರವರ ಕಾಲೇಜಿನ ವಿದ್ಯಾರ್ಥಿಗಳ ನಡುವೆ ಪರಸ್ಪರ ಸಂಪರ್ಕ ಬೆಳೆಸುವ ಉದ್ದೇಶದಿಂದ ಈ ನೆಟ್ವರ್ಕ್ ಆರಂಭಿಸಲಾಗಿತ್ತು. ಒಂದು ಸಣ್ಣ ಪೋರ್ಟಲ್ ಆಗಿದ್ದ ಫೇಸ್ಬುಕ್ ಇಂದು ವಿಶ್ವದಾದ್ಯಂತ 1.5 ಬಿಲಿಯನ್ ಬಳಕೆದಾರರನ್ನು ಹೊಂದಿದೆ.
ಜನರ ಜೀವನದಲ್ಲಿ ಸ್ನೇಹ ಸಂಬಂಧಗಳಿಂದ ಆಗಿರುವ ಬದಲಾವಣೆಯನ್ನು ಹಂಚಿಕೊಳ್ಳುವ ಸಂಬಂಧ ಫೇಸ್ಬುಕ್ ವಾರ್ಷಿಕೋತ್ಸವವನ್ನು #friendsday ಮೂಲಕ ಆಚರಿಸಲು ಝುಕರ್ಬರ್ಗ್ ಬಯಸಿದ್ದಾರೆ.
ಫೆ.4ರಂದು ಫೇಸ್ಬುಕ್ ಬಳಕೆದಾರರು ತಮ್ಮ ಸ್ನೇಹ ಸಂಬಂಧಗಳ ಬಗ್ಗೆ ಹಂಚಿಕೊಳ್ಳುವಂತೆ ಕೇಳಿಕೊಂಡಿದ್ದಾರೆ.
ವಿಶ್ವದಾದ್ಯಂತ ಹೆಚ್ಚಿನ ಮಟ್ಟದಲ್ಲಿ ಜನರೊಂದಿಗೆ ಸಂಪರ್ಕ ಕಲ್ಪಿಸಲು ಫೇಸ್ಬುಕ್ ಕಳೆದ 12 ವರ್ಷಗಳಿಂದ ವಿವಿಧ ಯೋಜನೆಗಳನ್ನು, ಉಪಕ್ರಮಗಳನ್ನು ಅಳವಡಿಸಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.