ಅಲಹಾಬಾದ್: ಅಲಹಾಬಾದ್ನ ಮುಸ್ಲಿಂ ತಂಡವೊಂದು ಶ್ರೀರಾಮನ ಹೆಸರನ್ನು ಬರೆಯುವ ಪದ್ಧತಿಯನ್ನು ರೂಢಿಸಿಕೊಂಡು ಬಂದಿದೆ. ಬಳಿಕ ಇದನ್ನು ಮಾಘ ಮೇಳದಲ್ಲಿ ಡಿಪೋಸಿಟ್ ಮಾಡಲಾಗುತ್ತದೆ.
ಪದ್ಧತಿಯ ಪ್ರಕಾರ ಭಕ್ತರು ಅನೇಕ ಬಾರಿ ಶ್ರೀರಾಮನ ಹೆಸರನ್ನು ಬರೆದು ಬಳಿಕ ಅದನ್ನು ರಾಮ್ ನಾಮ್ ಬ್ಯಾಂಕ್ನಲ್ಲಿ ಡಿಪೋಸಿಟ್ ಮಾಡಲಾಗುತ್ತದೆ. ಇದನ್ನು ಅಲಹಾಬಾದ್ನಲ್ಲಿ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತದೆ.
ಜ.24 ರ ಪೌಷ ಪೂರ್ಣಿಮಾದಿಂದ ಫೆ.22 ರ ಮಾಘಿ ಪೂರ್ಣಿಮಾದವರೆಗೆ ಗಂಗಾ ನದಿ ತಟದಲ್ಲಿ ಕಲ್ಪಾವಾಸ್ನ್ನು ಆಚರಿಸಲಾಗುತ್ತದೆ. ಇದನ್ನು ಮುಸ್ಲಿಂ ಸಮುದಾಯದವರೂ ಆಚರಿಸುತ್ತಾರೆ.
’10 ವರ್ಷಗಳ ಹಿಂದೆ ನಾನು ರಾಮನ ಹೆಸರು ಅಸಾಧಾರಣ ಶಕ್ತಿಯನ್ನು ನೀಡುತ್ತದೆ ಎಂಬ ಲೇಖನವನ್ನು ಓದಿದೆ. ಹೀಗಾಗಿ ಅಲ್ಲಿಂದ ರಾಮನ ಹೆಸರನ್ನು ಬರೆಯುತ್ತಾ ಬಂದಿದ್ದೇನೆ. ಇದರಿಂದ ನನಗೆ ಶಕ್ತಿ, ಸಾಮರ್ಥ್ಯ, ಶ್ರದ್ಧೆ ಮತ್ತು ಭಕ್ತಿ ಸಿಗುತ್ತದೆ. ನಾನು ಈಗಾಗಲೇ ಸುಮಾರು ಲಕ್ಷಗಳಷ್ಟು ಬಾರಿ ರಾಮನಾಮವನ್ನು ಬರೆದಿದ್ದೇನೆ’ ಎನ್ನುತ್ತಾರೆ ಫೈಸಲ್ ಖಾನ್.
ಇವರು ಹಿಂದಿ, ಇಂಗ್ಲೀಷ್, ಉರ್ದುವಿನಲ್ಲಿ ಅದರಲ್ಲೂ ಎರಡೂ ಕೈಗಳನ್ನು ಉಪಯೋಗಿಸಿ ರಾಮನ ಹೆಸರನ್ನು ಬರೆಯುತ್ತಾರೆ ಎಂಬುದು ವಿಶೇಷ.
ಇವರ ತಂಡದಲ್ಲಿರುವ ಅಬ್ದುಲ್ ರಬ್, ಮೊಹಮ್ಮದ್ ಅಮಿನ್ ಖಾನ್ ಮತ್ತು ಮುಖ್ತಾ ಇವರೆಲ್ಲರೂ ದಿನಕ್ಕೆ ಐದು ಬಾರಿ ನಮಾಝ್ ಮಾಡುತ್ತದೆ, ಮಸೀದಿಗೆ ಹೋಗುತ್ತಾರೆ ಮತ್ತು ರಂಜಾನ್ ಉಪವಾಸ ಆಚರಿಸುತ್ತಾರೆ. ಜೊತೆಗೆ ಭಗವದ್ಗೀತೆಯ ಶ್ಲೋಕ, ಮಂತ್ರಗಳನ್ನೂ ಇವರು ಹೃದಯದಿಂದ ಪಠಿಸುತ್ತಾರೆ. ರಾಮ ನವಮಿ ಆಚರಣೆಯಲ್ಲೂ ಭಾಗವಹಿಸುತ್ತಾರೆ.
ಎಲ್ಲರೂ ಒಂದೇ ಎಂಬ ಭಾವನೆಯಿಂದ ಒಂದು ಕೈಯಲ್ಲಿ ಭಗವದ್ಗೀತೆ ಮತ್ತು ಮತ್ತೊಂದು ಕೈಯಲ್ಲಿ ಖುರಾನ್ ಹಿಡಿದು ಸಾಮರಸ್ಯತೆಯಿಂದ ಬಾಳಬೇಕು. ಪ್ರತಿಯೊಬ್ಬರೂ ಧರ್ಮದಿಂದ ಗುರುತಿಸಲ್ಪಡದೆ, ಮನುಷ್ಯರು ಎಂದು ಪರಿಗಣಿಸಲ್ಪಡಬೇಕು. ಉತ್ತಮ ಕರ್ಮ ಮತ್ತು ಮೋಕ್ಷ ಒಳ್ಳೆಯ ಕಾರ್ಯಗಳಿಂದ ಸಿಗುತ್ತದೆ ಎನ್ನುತ್ತಾರೆ ಫೈಸಲ್ ಖಾನ್.
ಬಹಳಷ್ಟು ಮುಸ್ಲಿಂ ಬಾಂಧವರು ರಾಮ ನವಮಿ ಆಚರಣೆಯಲ್ಲಿ ಹಲವು ವರ್ಷಗಳಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದರು.
ರಾಮ್ ನಾಮ್ ಬ್ಯಾಂಕಿನ ಆಧ್ಯಕ್ಷರಾದ ಅಶುತೋಷ್ ವರ್ಷಣೆಯವರು, ರಾಮ ನಾಮವನ್ನು ಬರೆಯುವುದರಿಂದ ನಮ್ಮನ್ನು ದೈವತ್ವದೊಂದಿಗೆ ನಮ್ಮ ಅಂತಃಶಕ್ತಿಯನ್ನು ಜೋಡಿಸುತ್ತದೆ. ಸಾವಿರಾರು ಭಕ್ತರು, ಮುಸ್ಲಿಂರನ್ನೂ ಒಳಗೊಂಡಂತೆ ಅನೇಕರು ಸುಮಾರು 10 ವರ್ಷಗಳಿಂದಲೂ ರಾಮ ನಾಮವನ್ನು ಬರೆದು ಈ ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡುತ್ತಾರೆ. ಇದು ಅವರಲ್ಲಿ ಸಹನೆ, ಧನಾತ್ಮಕ ವಿಚಾರಗಳು, ಜೀವನದಲ್ಲಿ ಬರುವ ಅಡೆತಡೆಗಳನ್ನು ಎದುರಿಸುವ ಶಕ್ತಿಯನ್ನು ಕೊಡುತ್ತದೆ. ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.