×
Home About Us Advertise With s Contact Us

ವಿದ್ಯಾರ್ಥಿಗಳಿಗೆ ಕಾಪಿ ಮಾಡಲು ಪುಸ್ತಕವನ್ನೇ ಕೊಡುತ್ತಿದೆ!

copyಪಾಟ್ನಾ: ಶಾಲಾ ಕಟ್ಟಡದ ಮೇಲೆ ಹತ್ತಿ ಪರೀಕ್ಷೆ ಬರೆಯುತ್ತಿರುವ ತಮ್ಮ ಮಕ್ಕಳಿಗೆ ಚೀಟಿ ನೀಡಿ ಕಾಪಿ ಮಾಡಲು ಪ್ರೋತ್ಸಾಹ ನೀಡುತ್ತಿರುವ ದೃಶ್ಯಾವಳಿಗಳು ಇಡೀ ದೇಶಾದ್ಯಂತ ಪಸರಿಸಿ ದೊಡ್ಡ ಸುದ್ದಿಯನ್ನೇ ಮಾಡಿದ್ದವು. ಬಿಹಾರ ಶಿಕ್ಷಣ ವ್ಯವಸ್ಥೆಯ ಗೌರವ ಇದರಿಂದ ಬೀದಿ ಪಾಲಾಯಿತು.

ಆದರೆ ಇದರಿಂದ ಬುದ್ಧಿ ಕಲಿಯದ ಅಲ್ಲಿನ ರಾಜಕಾರಣಿಗಳು ಮಾತ್ರ ಇನ್ನೂ ಸಮೂಹಿಕ ನಕಲಿಗೆ ಬಹಿರಂಗವಾಗಿಯೇ ಬೆಂಬಲ ನೀಡುತ್ತಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ನಿಸ್ಸೀಮರಾದ ಆರ್‌ಜೆಡಿ ಮುಖಂಡ ನೀಡಿದ ಹೇಳಿಕೆಯಂತೂ ಅವರ ನೈತಿಕ ಅಧಃಪತನವನ್ನು ಪ್ರತಿಬಿಂಬಿಸುತ್ತಿದೆ.

‘ಜನರು ಅಷ್ಟು ದೊಡ್ಡ ದೊಡ್ಡ ಬಿಲ್ಡಿಂಗ್ ಮೇಲೆ ಹಲ್ಲಿಯಂತೆ ಹತ್ತಿ ವಿದ್ಯಾರ್ಥಿಗಳಿಗೆ ಕಾಪಿ ಮಾಡಲು ಚೀಟ್ ರವಾನಿಸುತ್ತಿದ್ದಾರೆ, ಒಂದು ವೇಳೆ ಆರ್‌ಜೆಡಿ ಅಧಿಕಾರದಲ್ಲಿರುತ್ತಿದ್ದರೆ ಅವರಿಗೆ ಕಾಪಿ ಮಾಡಲು ಇಡೀ ಪುಸ್ತಕವನ್ನೇ ನೀಡುತ್ತಿದ್ದೆವು’ ಎಂದಿದ್ದಾರೆ.

ಇವರ ರಾಜಕಾರಣಿಗಳು ಹೇಳಿಕೆ ಕೇಳಿ ನಕಲು ಮಾಡುವ ಬಿಹಾರದ ವಿದ್ಯಾರ್ಥಿಗಳು ಫುಲ್ ಖುಷ್ ಆಗಿದ್ದಾರೆ. ಮುಂದೆ ಇವರಿಗೆಯೇ ಮತಚಲಾಯಿಸಲು ತುದಿಗಾಲ ಮೇಲೆ ನಿಂತಿದ್ದಾರೆ.

ಈ ಹಿಂದೆ ಅಲ್ಲಿನ ಶಿಕ್ಷಣ ಸಚಿವರು ಪರೀಕ್ಷೆಯಲ್ಲಿ ನಕಲು ನಡೆಯುವುದನ್ನು ಶೇ.100ರಷ್ಟು ತಡೆಯಲು ಸಾಧ್ಯವಿಲ್ಲ ಎನ್ನುವ ಮೂಲಕ ತಮ್ಮ ಅಸಹಾಯಕತೆಯನ್ನು ತೋರ್ಪಡಿಸಿದ್ದರು. ಇಂತಹ ಮಂತ್ರಿಗಳಿರುವ ರಾಜ್ಯದಲ್ಲಿ ವಿದ್ಯಾರ್ಥಿಗಳು ಅವರ ಪೋಷಕರು ಪ್ರಾಮಾಣಿಕರಾಗಿರಲು ಹೇಗೆ ಸಾಧ್ಯ?.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top