ಚೆನ್ನೈ: ಈ ಬಾರಿಯ ಪೊಂಗಲ್ ಹಬ್ಬಕ್ಕೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಜನತೆಗೆ ಭರ್ಜರಿ ಗಿಫ್ಟ್ನ್ನೇ ನೀಡಿದ್ದಾರೆ.
ಒಟ್ಟು 1.91 ಕೋಟಿ ರೇಶನ್ ಕಾರ್ಡ್ ಹೊಂದಿರುವವರಿಗೆ ರೂ.1000 ನಗದು, ಒಂದು ಕೆ.ಜಿ ಅಕ್ಕಿ, ಸಕ್ಕರೆ ಮತ್ತು ಎರಡು ಅಡಿ ಉದ್ದದ ಕಬ್ಬಿನ ತುಂಡನ್ನು ಉಚಿತವಾಗಿ ನೀಡುತ್ತಿದ್ದಾರೆ. ಇದಕ್ಕಾಗಿ 318 ಕೋಟಿ ರೂಪಾಯಿಯನ್ನು ವ್ಯಯಿಸಲಾಗಿದೆ.
ತಮಿಳುನಾಡಿನಲ್ಲಿ ಸಂಭ್ರಮದಿಂದ ಆಚರಿಸಲಾಗುವ ಸುಗ್ಗಿ ಹಬ್ಬ ಪೊಂಗಲ್ನ್ನು ಜ.15ರಂದು ಆಚರಿಸಲಾಗುತ್ತದೆ.
ರೇಶನ್ ಅಂಗಡಿಗಳ ಮೂಲಕ ಈ ಗಿಫ್ಟ್ಗಳನ್ನು ಜನರಿಗೆ ಹಂಚಲಾಗುತ್ತಿದೆ. ರೇಶನ್ ಕಾರ್ಡುದಾರರು ಮಾತ್ರವಲ್ಲದೇ ಶ್ರೀಲಂಕಾದ ನಿರಾಶ್ರಿತ ತಮಿಳರು, ಪೊಲೀಸ್ ಸಿಬ್ಬಂದಿಗಳಿಗೂ ಈ ಗಿಫ್ಟ್ ದೊರಕಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.