News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹುತಾತ್ಮ ದಿನದ ಬ್ಯಾನರ್‌ನಲ್ಲಿ ಅಮೆರಿಕ ಯೋಧರು!

martyersಚಂಡೀಗಢ: ಭಗತ್ ಸಿಂಗ್, ರಾಜ್‌ಗುರು, ಸುಖ್‌ದೇವ್ ಈ ದೇಶಕ್ಕಾಗಿ ಬಲಿದಾನ ಮಾಡಿದ ದಿನವಾದ ಮಾ.23ರನ್ನು ದೇಶದಾದ್ಯಂತ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತಿದೆ.

ಅದರಂತೆ ಚಂಡೀಗಢದ ಮುನ್ಸಿಪಲ್ ಕಾರ್ಪೊರೇಶನ್ ಕೂಡ ಹುತಾತ್ಮ ದಿನದ ಅಂಗವಾಗಿ ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ಹಾಕಿದೆ. ಆದರೆ ಈ ಬ್ಯಾನರ್‌ಗಳಲ್ಲಿ ಭಾರತೀಯ ಯೋಧರ ಬದಲಾಗಿ ಅಮೆರಿಕ ಯೋಧರ ಭಾವಚಿತ್ರಗಳನ್ನು ಹಾಕಿ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ.

ಹುತಾತ್ಮ ದಿನದ ಅರಿವು ಜನರಿಗಾಗಲಿ ಎಂಬ ಕಾರಣಕ್ಕೆ ಮತ್ತು ಯೋಧರ ವಿಧವೆಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡ ಹಿನ್ನಲೆಯಲ್ಲಿ ಈ ಬ್ಯಾನರ್‌ಗಳನ್ನು ಹಾಕಲಾಗಿದೆ, ಆದರೆ ಎಡವಟ್ಟು ಮಾಡಿಕೊಂಡ ಕಾರ್ಪೋರೇಶನ್ ಬ್ಯಾನರ್‌ಗಳಲ್ಲಿ ಭಾರತೀಯ ಯೋಧರ ಬದಲಿಗೆ 3 ಅಮೆರಿಕ ಯೋಧರ ಭಾವಚಿತ್ರವನ್ನು ಹಾಕಿ ಹುತಾತ್ಮ ದಿನದ ನಮನ ಸಲ್ಲಿಸಿದೆ.

ಘಟನೆಗೆ ವಿಷಾದ ವ್ಯಕ್ತಪಡಿಸಿರುವ ಕಾರ್ಪೋರೇಶನ್ ಇಂಟರ್‌ನೆಟ್‌ನಿಂದ ಇಮೇಜ್‌ನ್ನು ಡೌನ್‌ಲೋಡ್ ಮಾಡುವ ಸಂದರ್ಭದಲ್ಲಿ ಈ ಪ್ರಮಾದವಾಗಿದೆ ಎಂದಿದ್ದಾರೆ.

ಹುತಾತ್ಮರ ವಿಷಯದಲ್ಲೂ ಈ ರೀತಿಯ ಎಡವಟ್ಟುಗಳನ್ನು ಮಾಡಿಕೊಂಡಿರುವುದಕ್ಕೆ  ಜನರಿಂದ ಆಕ್ರೋಶಗಳು ವ್ಯಕ್ತವಾಗಿದೆ.

ಮಾ.23ರಂದು ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖ್‌ದೇವ್ ಅವರು ದೇಶಕ್ಕಾಗಿ ಬ್ರಿಟಷರ ನೇಣಿಗೆ ಕೊರಳೊಡ್ಡಿದರು. ಈ ದಿನವನ್ನು ಹುತಾತ್ಮ ದಿನವಾಗಿ ಭಾರತದಲ್ಲಿ ಆಚರಿಸಲಾಗುತ್ತಿದೆ. ಈ ದಿನ ಹುತಾತ್ಮರಾದ ಎಲ್ಲಾ ಯೋಧರಿಗೂ ಗೌರವ ಸಲ್ಲಿಸಲಾಗುತ್ತದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top