News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಾಕಿಸ್ಥಾನ ದಿನಾಚರಣೆಯಲ್ಲಿ 7 ಪ್ರತ್ಯೇಕತಾವಾದಿಗಳು ಭಾಗಿ

saparatistನವದೆಹಲಿ: ದೆಹಲಿಯಲ್ಲಿನ ಪಾಕಿಸ್ಥಾನದ ರಾಯಭಾರ ಕಛೇರಿಯಲ್ಲಿ ಸೋಮವಾರ ಪಾಕಿಸ್ಥಾನದ ರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತಿದೆ. ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಜಮ್ಮು ಕಾಶ್ಮೀರದ 7 ಪ್ರತ್ಯೇಕತಾವಾದಿ ನಾಯಕರುಗಳು ಈಗಾಗಲೇ ನವದೆಹಲಿಗೆ ಬಂದಿಳಿದಿದ್ದಾರೆ.

ಇದೇ ಸಂದರ್ಭ ಪ್ರತ್ಯೇಕತಾವಾದಿಗಳು ಪಾಕಿಸ್ಥಾನಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ’ತನ್ನ ರಾಷ್ಟ್ರೀಯ ದಿನಾಚರಣೆಯ ಸಮಾರಂಭಕ್ಕೆ ಯಾರನ್ನೂ ಬೇಕಾದರು ಆಹ್ವಾನಿಸಲು ಪಾಕಿಸ್ಥಾನ ಸ್ವತಂತ್ರ’ ಎಂದಿದ್ದಾರೆ.

ಅಲ್ಲದೇ ಪಾಕಿಸ್ಥಾನ ಭಯದ ವಾತಾವರಣವನ್ನು ಹತ್ತಿಕ್ಕಬೇಕು, ಗಡಿಯನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸಬೇಕು.  ಭಾರತ ಅದರೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಸಿದ್ಧ ಎಂದಿದ್ದಾರೆ.

ಪಾಕಿಸ್ಥಾನ ಮಾ.23ರಂದು ತನ್ನ ರಾಷ್ಟ್ರೀಯ ದಿನವನ್ನಾಗಿ ಆಚರಿಸಿಕೊಳ್ಳುತ್ತದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top