×
Home About Us Advertise With s Contact Us

ಭಾರತ 57 ದೋಣಿಗಳನ್ನು ಬಿಡುಗಡೆ ಮಾಡಿದ ಪಾಕ್

boatಇಸ್ಲಾಮಾಬಾದ್: ಸೌಹಾರ್ದತೆಯ ಪ್ರತೀಕವಾಗಿ ತನ್ನ ಕಸ್ಟಡಿಯಲ್ಲಿದ್ದ ಭಾರತದ ಒಟ್ಟು ೫೭ ಮೀನುಗಾರಿಕಾ ದೋಣಿಗಳನ್ನು ಪಾಕಿಸ್ಥಾನ ಶನಿವಾರ ಬಿಡುಗಡೆಗೊಳಿಸಿದೆ.

ಅಲ್ಲಿನ ಪ್ರಧಾನಿ ನವಾಝ್ ಶರೀಫ್ ಅವರು ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭಕ್ಕಾಗಿ ಭಾರತಕ್ಕೆ ಆಗಮಿಸಿದ ವೇಳೆ ಈ ಈ ದೋಣಿಗಳನ್ನು ಬಿಡುಗಡೆಗೊಳಿಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು.

ಬಿಡುಗಡೆಯ ಪ್ರಕ್ರಿಯೆಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಮಾ.9ರಂದು 8 ಸದಸ್ಯರುಳ್ಳ ಭಾರತದ ನಿಯೋಗ ಕರಾಚಿಗೆ ತೆರಳಿ ಪಾಕಿಸ್ಥಾನದ ಸಮುದ್ರ ಭದ್ರತಾ ಪಡೆಗಳನ್ನು ಭೇಟಿಯಾಗಿತ್ತು.

ಪಾಕಿಸ್ಥಾನದಿಂದ ಆಗಮಿಸುವ ದೋಣಿಗಳನ್ನು ಅದರ ಮಾಲೀಕರಿಗೆ ಹಿಂದಿರುಗಿಸುವುದಾಗಿ ಕೇಂದ್ರ ಭರವಸೆ ನೀಡಿದೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top