×
Home About Us Advertise With s Contact Us

ಜಮ್ಮುವಿನಲ್ಲಿ ಎನ್ ಕೌಂಟರ್ : 2 ಉಗ್ರರ ಹತ್ಯೆ

terrorಜಮ್ಮು: ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದೆ. ಶನಿವಾರ ಸಾಂಬಾ ಸೆಕ್ಟರ್‌ನ ಆರ್ಮಿ ಕ್ಯಾಂಪನ್ನು ಟಾರ್ಗೆಟ್ ಮಾಡಿರುವ ಉಗ್ರರು ರಕ್ಷಣಾಪಡೆಗಳ ಮೇಲೆ ದಾಳಿ ನಡೆಸಿದ್ದಾರೆ.

ಸ್ಥಳದಲ್ಲಿ ಗುಂಡಿನ ಚಕಮಕಿ ಮುಂದುವರೆದಿದೆ. ಸ್ಥಳದಲ್ಲೇ ಇಬ್ಬರು ಉಗ್ರರನ್ನು ಹತ್ಯೆ ಮಾಡುವಲ್ಲಿ  ಯೋಧರು ಸಫಲರಾಗಿದ್ದಾರೆ.

ಮುಂಜಾಗೃತೆಯ ಕ್ರಮವಾಗಿ ಸಾಂಬಾದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವೈಷ್ಣೋದೇವಿ ಯಾತ್ರಿಕರಿಗೆ ನೀಡಿರುವ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

‘ಕಾರ್ಯಾಚರಣೆ ಮುಂದುವರೆದಿದ್ದು ಸಂಪೂರ್ಣ ವರದಿ ಇನ್ನಷ್ಟೇ ಲಭ್ಯವಾಗಿದೆ. ಕಳೆದ ಎರಡು ದಿನಗಳಿಂದ ನಮ್ಮ ರಕ್ಷಣಾಪಡೆಗಳು ಹೈಅಲರ್ಟ್‌ನಲ್ಲಿವೆ. ಇಂದಿನ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಉಗ್ರರು ಯಾವುದೇ ಆರ್ಮಿ ಘಟಕದೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿಲ್ಲ ಬದಲಾಗಿ ಹೊರಗಿನಿಂದಲೇ ಗುಂಡು ಹಾರಿಸುತ್ತಿದ್ದಾರೆ’ ಎಂದು ಸೈನ್ಯಾಧಿಕಾರಿ ಮನೀಶ್ ಮೆಹ್ತಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top