ಪಾಕಿಸ್ತಾನದ ಸಂಗೀತಗಾರ ನಸ್ರತ್ ಫತೇಹ್ ಅಲಿ ಖಾನ್ ಸುಫಿಗಳ ಖವ್ವಾಲಿ ಭಕ್ತಿಗೀತೆಗಳಿಗೆ ಪ್ರಸಿದ್ಧಿ ಪಡೆದವರು. ಓರ್ವ ಪ್ರಸಿದ್ಧ ಗಾಯಕರಾಗಿದ್ದ ಅವರು, ಹಲವು ಗಂಟೆಗಳ ಕಾಲ ನಿರಂತರವಾಗಿ ಹಾಡಬಲ್ಲ ಸಾಮರ್ಥ್ಯ ಹೊಂದಿದ್ದರು.
ಪಂಜಾಬ್ನ ಮುಸ್ಲಿಂ ಕುಟುಂಬದವರಾದ ಖಾನ್, ತನ್ನ ಕುಟುಂಬದ 600 ವರ್ಷ ಹಳೆಯ ಕವ್ವಾಲಿ ಸಂಪ್ರದಾಯವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿದವರು. ಪ್ರೇಕ್ಷರಿಗೆ ಕವ್ವಾಲಿ ಸಂಗೀತವನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ಕವ್ವಾಲಿಯ ’ಶೆಹನ್ಶಾಹ್’ (ರಾಜಾಧಿರಾಜ) ಎಂದೇ ಚಿರಪರಿಚಿತರು.
ಫೈಸಲಾಬಾದ್ನಲ್ಲಿ ಜನಿಸಿದ ಫತೇಹ್ ಅಲಿ ಖಾನ್, 1971ರಲ್ಲಿ ತಮ್ಮ 16ನೇ ವರ್ಷದಲ್ಲೇ ಸಾರ್ವಜನಿಕ ಸಂಗೀತ ಪ್ರದರ್ಶನಗಳನ್ನು ನೀಡಲಾರಂಭಿಸಿದ್ದರು. 1980ರಲ್ಲಿ ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ ’ಒರಿಯೆನ್ಟಲ್ ಸ್ಟಾರ್ ಏಜೆನ್ಸೀಸ್’ಗೆ ಸಹಿ ಮಾಡುವ ಮೂಲಕ ಯುರೋಪ್, ಭಾರತ, ಪಾಕಿಸ್ತಾನ, ಯುಎಸ್, ಜಪಾನ್ಗಳಲ್ಲಿ ಹಲವು ಆಲ್ಬಮ್ ಹಾಗೂ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.
ಹಿಂದಿ ಸಿನೇಮಾಗಳಾದ ’ಔರ್ ಪ್ರ್ಯಾರ್ ಹೋ ಗಯಾ’ ದ ಕೋಯಿ ಜಾನೆ ಕೋಯಿ ನಾ ಜಾನೆ ಹಾಗೂ ’ಕಚ್ಚೇ ಧಾಗೇ’ ಸಿನೇಮಾಗಳಲ್ಲಿ ಹಾಡಿರುವ ನಸ್ರತ್ ಫತೇಹ್ ಅಲಿ ಖಾನ್ ’ದಿಲ್ಲಗಿ’ ಸಿನೇಮಾದ ಸಾಯಾ ಭೀ ಜಬ್ ಸಾಥ್ ಛೋಡ್ ಆಯೆ ಹಾಡನ್ನು ಹಾಡಿದ್ದಾರೆ. ಎ.ಆರ್ ರೆಹಮಾನ್ ಅವರ’ವಂದೇ ಮಾತರಂ’ ಅಲ್ಬಂನ ಹಾಡಗಳನ್ನೂ ಹಾಡಿದ್ದಾರೆ.
ಲಂಡನ್ನಲ್ಲಿ 1985ರಲ್ಲಿ ವರ್ಲ್ಡ್ ಆಫ್ ಮ್ಯೂಸಿಕ್, ಆರ್ಟ್ಸ್ ಎಂಡ್ ಡ್ಯಾನ್ಸ್ ಪ್ದರ್ಶಿಸಿದ ಅವರು, 1985 ಮತ್ತು 1988ರಲ್ಲಿ ಪ್ಯಾರಿಸ್ನಲ್ಲಿ ಪ್ರದರ್ಶಿಸಿದರು. 1989ರಲ್ಲಿ ನ್ಯೂಯಾರ್ಕ್ನ ಬ್ರೂಕ್ಲಿನ್ ಅಕಾಡೆಮಿ ಆಫ್ ಮ್ಯೂಸಿಕ್, 1988ರಲ್ಲಿ ಪೀಟರ್ ಗ್ಯಾಬ್ರಿಯಲ್ ಜೊತೆಗೂಡಿ ’ದಿ ಲಾಸ್ಟ್ ಟೆಮ್ಟೇಷನ್ ಆಫ್ ಕ್ರೈಸ್ಟ್’ಗೆ ಧ್ವನಿಗೂಡುಸಿದ್ದರು.
1995ರಲ್ಲಿ ಯೂನೆಸ್ಕೋ ಸಮಗೀತ ಪ್ರಶಸ್ತಿ, 1996ರಲ್ಲಿ ಮೋನ್ಟ್ರಿಯಲ್ ಫಿಲ್ಮ ಫೇರ್ ಕಾರ್ಯಕ್ರಮದಲ್ಲಿ ’ಗ್ರ್ಯಾಂಡ್ ಪ್ರಿಕ್ಸ್ ಡೆಸ್ ಅಮೇರಿಕಸ್’ 2005ರಲ್ಲಿ ಯುಕೆ ಏಶಿಯನ್ ಮ್ಯೂಸಿಕ್ ಅವಾರ್ಡ್ಸ್ನಿಂದ ’ಲೆಜೆಂಡ್ಸ್’ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.