×
Home About Us Advertise With s Contact Us

ವಿಶ್ವಭಾರತಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಮೋದಿ ನೇಮಕ

modiನವದೆಹಲಿ: ಮುಂದಿನ 3 ವರ್ಷಗಳ ಅವಧಿಗೆ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಭಾರತಿ ವಿಶ್ವವಿದ್ಯಾನಿಲಯ ಕುಲಪತಿಗಳಾಗಿ ಆಯ್ಕೆಯಾಗಿದ್ದಾರೆ. ಇತ್ತೀಚಿಗಷ್ಟೇ ಈ ಸ್ಥಾನದಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೆಳಗಿಳಿದಿದ್ದರು.

ಕಳೆದ ಜುಲೈನಲ್ಲಿ ಮೋದಿಯವರನ್ನು ಕುಲಪತಿಯನ್ನಾಗಿ ನೇಮಿಸುವಂತೆ ವಿಶ್ವವಿದ್ಯಾನಿಲಯದ ಕಾರ್ಯಕಾರಿ ಸಮಿತಿ ನಿರ್ಣಯವನ್ನು ಜಾರಿಗೊಳಿಸಿತ್ತು.

1951ರ ಸಂಸತ್ತ್ ಕಾಯ್ದೆಯ ಅನ್ವಯ ವಿಶ್ವಭಾರತಿ ವಿಶ್ವವಿದ್ಯಾನಿಲಯವನ್ನು ಕೇಂದ್ರ ವಿಶ್ವವಿದ್ಯಾನಿಲಯ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿ ಘೋಷಿಸಲಾಯಿತು.

ಪ್ರಧಾನಿಯನ್ನು ಕುಲಪತಿಯನ್ನಾಗಿ ಹೊಂದಿದ ದೇಶದ ಏಕೈಕ ಕೇಂದ್ರ ವಿಶ್ವವಿದ್ಯಾನಿಲಯ ಇದಾಗಿದೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top