Tuesday, 20th February 2018
×
Home About Us Advertise With s Contact Us

ಆಸ್ಟ್ರೇಲಿಯಾಗೆ ಮಣಿದ ಪಾಕಿಸ್ಥಾನ

matchಅಡಿಲೆಡ್: ವಿಶ್ವಕಪ್ ಪಂದ್ಯಾವಳಿಯ 3ನೇ ಕ್ವಾಟರ್‌ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡ ಪಾಕಿಸ್ಥಾನವನ್ನು 6 ವಿಕೆಟ್‌ಗಳ ಮೂಲಕ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.

ಅಡಿಲೇಡ್ ಓವಲ್ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು  ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ಥಾನ 49.5 ಓವರ್‌ಗಳಲ್ಲಿ  213ರನ್‌ಗಳಿಗೆ ಸರ್ವಪತನಗೊಂಡಿತ್ತು.

ಅಹ್ಮದ್ ಶೆಹ್ಜಾದ್ 5 ರನ್ ಮತ್ತು ಸರ್ಫಾಜ್ ಅಹಮದ್ 10 ರನ್ ಪಡೆದು ಬೇಗನೇ ವಿಕೆಟ್ ಒಪ್ಪಿಸಿದರು. ಹ್ಯಾರಿಸ್ ಸೊಹೈಲ್ (41 ರನ್), ನಾಯಕ ಮಿಸ್ ಬಾ ಉಲ್ ಹಕ್ (34 ರನ್) ಮತ್ತು ಸೊಹೇಬ್ ಮಕ್ಸೂದ್ (29 ರನ್) ಅವರನ್ನು ಹೊರತು ಪಡಿಸಿ ಇತರೆ ಪಾಕ್ ಆಟಗಾರರು ಆಸ್ಟ್ರೇಲಿಯಾಕ್ಕೆ ಪ್ರತಿರೋಧ ತೋರಲಿಲ್ಲ.

ಆಸ್ಟ್ರೇಲಿಯಾ ಬೌಲಿಂಗ್‌ನಲ್ಲಿ  ಹ್ಯಾಜಲೆವುಡ್  35 ರನ್ ನೀಡಿ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ಮಿಷೆಲ್ ಸ್ಟಾರ್ಕ್, ಮ್ಯಾಕ್ಸ್ ವೆಲ್ ತಲಾ 2 ವಿಕೆಟ್ ಪಡೆದರು. ಜಾನ್ಸನ್, ಫಾಲ್ಕನರ್ ತಲಾ 1 ವಿಕೆಟ್ ಕಬಳಿಸಿದರು.

ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ 34 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 216 ಪೇರಿಸಿ ಜಯದ ನಗು ಬೀರಿತು.

ಮಾ.26ರಂದು ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ ಕಾದಾಡಲಿದೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top