Monday, August 24th, 2015
Admin
ಧೋಲ್ಪುರ: ರಾಜಸ್ಥಾನದ ಧೋಲ್ಪುರದಲ್ಲಿರುವ ಒಂದು ಸಾವಿರ ಇತಿಹಾಸವಿರುವ ಶಿವಲಿಂಗದ ಬಣ್ಣ ದಿನಕ್ಕೆ ಮೂರು ಬಾರಿ ಬದಲಾಗುತ್ತದೆ.
ಬೆಳಗ್ಗೆ ಕೆಂಪು ಬಣ್ಣವಿದ್ದರೆ, ಮಧ್ಯಾಹ್ನ ಇದರ ಬಣ್ಣ ಕೇಸರಿಯಾಗಿ ಪರಿವರ್ತನೆಗೊಳ್ಳುತ್ತದೆ, ರಾತ್ರಿ ಹೊತ್ತಿಗೆ ಕಡು ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ಇದು ಅತಿ ಶಕ್ತಿಯುತ ಶಿವಲಿಂಗ ಎಂದು ಖ್ಯಾತಿ ಪಡೆದಿದ್ದು, ಅವಿವಾಹಿತರು ಇಲ್ಲಿ ಬಂದು ಪ್ರಾರ್ಥಿಸಿದರೆ ಶೀಘ್ರದಲ್ಲೇ ಅವರಿಗೆ ಕಂಕಣಭಾಗ್ಯ ಕೂಡಿ ಬರುತ್ತದೆ ಎಂಬ ನಂಬಿಕೆ ಇದೆ.
ಈ ಶೀವಲಿಂಗದ ಬಣ್ಣ ಬದಲಾಗಲು ಸೂರ್ಯನ ಬೆಳಕು ಕಾರಣವಿರಬಹುದು ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ಆದರೆ ಅವರ ಈ ವಾದವನ್ನು ಇದುವರೆಗೆ ಯಾವುದೇ ಸಂಶೋಧನೆಗಳು ಪುಷ್ಟೀಕರಿಸಿಲ್ಲ.
ಶಿವನ ಮಹಿಮೆಯಿಂದಲೇ ಇದರ ಬಣ್ಣ ಬದಲಾಗುತ್ತದೆ ಎಂಬ ಗಾಢವಾದ ನಂಬಿಕೆ ಭಕ್ತರಲ್ಲಿದೆ.