×
Home About Us Advertise With s Contact Us

ರಾಜ್ಯಪಾಲರನ್ನು ಭೇಟಿಯಾದ ಸಿಎಂ

vaju1ಬೆಂಗಳೂರು: ಡಿ.ಕೆ.ರವಿ ಅನುಮಾನಾಸ್ಪದ ಸಾವು ಪ್ರಕರಣದ ಸಂಬಂಧ ಚರ್ಚಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ರಾಜ್ಯಪಾಲ ವಜುಬಾಯ್ ವಾಲಾ ಅವರನ್ನು ಭೇಟಿಯಾದರು.

ನಿನ್ನೆಯಷ್ಟೇ ಪ್ರತಿಪಕ್ಷಗಳ ನಾಯಕರುಗಳು ರಾಜ್ಯಪಾಲರನ್ನು ಭೇಟಿಯಾಗಿ ರವಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಇಂದು ಸಿದ್ದರಾಮಯ್ಯರನ್ನು ರಾಜ್ಯಪಾಲರು ತಮ್ಮ ಬಳಿ ಕರೆಸಿಕೊಂಡಿದ್ದರು.

ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ‘ಪ್ರಕರಣದ ಬಗ್ಗೆ ರಾಜ್ಯಪಾಲರಿಗೆ ಸಂಪೂರ್ಣ ಮಾಹಿತಿ ನೀಡಿದ್ದೇನೆ. ಸಿಐಡಿ ತನಿಖೆಯ ಮಾಹಿತಿಯನ್ನೂ ಒದಗಿಸಿದ್ದೇನೆ’ ಎಂದರು.

ಸಿಬಿಐಗೆ ತನಿಖೆಗೆ ಆಗ್ರಹಿಸಿ ಇಡೀ ಕರ್ನಾಟಕದ ಜನತೆ ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೂ ಸರ್ಕಾರ ಮಾತ್ರ ತನ್ನ ಪಟ್ಟನ್ನು ಸಡಿಲಗೊಳಿಸುತ್ತಿಲ್ಲ. ಸಿದ್ದರಾಮಯ್ಯ ತನ್ನ ಮೊಂಡು ಹಠವನ್ನು ಇದೇ ರೀತಿ ಮುಂದುವರೆಸಿದರೆ ರಾಜ್ಯದ ಜನತೆ ಅವರಿಗೆ ತಕ್ಕ ಪಾಠವನ್ನೇ ಕಲಿಸುತ್ತಾರೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top