×
Home About Us Advertise With s Contact Us

ಹಳಿ ತಪ್ಪಿದ ಜನತಾ ಎಕ್ಸ್‌ಪ್ರೆಸ್ ರೈಲು: 6 ಬಲಿ

janatha1ಬರೇಲಿ: ಉತ್ತರಪ್ರದೇಶದ ರಾಯ್‌ಬರೇಲಿಯ ಬಚ್ರಾವನ್ ಸಮೀಪ ಚಲಿಸುತ್ತಿದ್ದ ಜನತಾ ಎಕ್ಸ್‌ಪ್ರೆಸ್ 1422 ರೈಲಿನ 3 ಬೋಗಿಗಳು ಶುಕ್ರವಾರ ಬೆಳಿಗ್ಗೆ ಹಳಿ ತಪ್ಪಿದೆ. ಪರಿಣಾಮ 6 ಮಂದಿ ಪ್ರಯಾಣಿಕರು ಮೃತರಾಗಿದ್ದಾರೆ. ಅಲ್ಲದೇ 40 ಮಂದಿಗೆ ಗಂಭೀರ ಗಾಯಗಳಾಗಿವೆ.

ಡೆಹ್ರಾಡೂನ್‌ನಿಂದ ವಾರಣಾಸಿ ಕಡೆ ಈ ರೈಲು ಪ್ರಯಾಣಿಸುತ್ತಿದ್ದು, ಇದರ ಒಂದು ಎಂಜಿನ್ ಮತ್ತು ಎರಡು ಬೋಗಿಗಳು ಹಳಿ ತಪ್ಪಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅವಘಡ ನಡೆದ ಸ್ಥಳಕ್ಕೆ ರೈಲ್ವೇಯ ಹಿರಿಯ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸಿಬ್ಬಂದಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುವುದಾಗಿ ರೈಲ್ವೇ ಖಾತೆಯ ರಾಜ್ಯ ಸಚಿವ ಮನೋಜ್ ಸಿನ್ಹಾ ತಿಳಿಸಿದ್ದಾರೆ.

 

 

 

 

 

 

 

 

Recent News

Back To Top
error: Content is protected !!