ವಾಷಿಂಗ್ಟನ್: ಪಾಕಿಸ್ಥಾನದ ಸೇನೆ ಧಾರ್ಮಿಕ ಉಗ್ರವಾದಿಗಳನ್ನು ಬೆಂಬಲಿಸಿಸುತ್ತಿದೆ ಮತ್ತು ಅದು ಕಾನೂನುಬಾಹಿರ ಕೊಲೆಗಳನ್ನು ಮಾಡುತ್ತಿದೆ ಎಂದು ಯುಎಸ್ ಸಂಸದ ಆರೋಪಿಸಿದ್ದಾರೆ.
ಪಾಕಿಸ್ಥಾನದಲ್ಲಿನ ಮೊಹಜಿರ್ ಸಮುದಾಯದ ಪರವಾಗಿ ಧ್ವನಿ ಎತ್ತಿರುವ ಯುಎಸ್ ಕಾಂಗ್ರೆಸ್ ಸದಸ್ಯ ಡಾನಾ ರೊಹ್ರಾಬಚರ್, ‘ಪಾಕಿಸ್ಥಾನದ ಭ್ರಷ್ಟ ಸೇನಾಧಿಕಾರಿಗಳು ಕರಾಚಿಯಲ್ಲಿ ಮೊಹಜಿರ್ ಸಮುದಾಯಕ್ಕೆ ಸೇರಿದ ಜನರನ್ನು ಕಾನೂನು ಬಾಹಿರವಾದ ರೀತಿಯಲ್ಲಿ ಹತ್ಯೆ ಮಾಡುತ್ತಿದೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.
‘ಪಾಕ್ ಸೇನೆ ಧಾರ್ಮಿಕ ಉಗ್ರವಾದಿಗಳಿಗೆ ಬಹಿರಂಗ ಬೆಂಬಲ ನೀಡುತ್ತಿದೆ, ಇದನ್ನು ಒಪ್ಪಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.
1947ರಲ್ಲಿ ಭಾರತವನ್ನು ತೊರೆದು ಪಾಕಿಸ್ಥಾನದ ಸಿಂಧ್ ಪ್ರಾಂತ್ಯದಲ್ಲಿ ನೆಲೆಯೂರಿರುವ ಉರ್ದು ಭಾಷಿಕ ವಲಸಿಗರನ್ನು ಮೊಹಜಿರ್ಗಳೆಂದು ಕರೆಯಲಾಗುತ್ತದೆ.
ರೊಹ್ರಾಬಚರ್ ಅವರು ಒಂದು ಕಾಲದಲ್ಲಿ ಪಾಕಿಸ್ಥಾನದ ಆತ್ಮೀಯನಾಗಿದ್ದರು, ಆದರೆ ಉಗ್ರರಿಗೆ ನೆಲೆ ಕಲ್ಪಿಸುತ್ತಿರುವ ಇಸ್ಲಾಮಾಬಾದ್ನ್ನು ಈಗ ಅವರು ಕಟುವಾಗಿ ಟೀಕಿಸಲಾರಂಭಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.