ನವದೆಹಲಿ: ಶೀಘ್ರದಲ್ಲೇ ಭಾರತ ರಷ್ಯಾದೊಂದೊಗೆ S400 ಟ್ರಿಂಪ್ ಏರ್ ಡಿಫೆನ್ಸ್ ಒಪ್ಪಂದಕ್ಕೆ ಅಂತಿಮ ಮುದ್ರ ಒತ್ತಲಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರಷ್ಯಾದಿಂದ S400 ಸರ್ಫೆಸ್ ಟು ಏರ್ ಆಂಟಿ ಮಿಸೈಲ್ ಖರೀದಿ ಒಪ್ಪಂದ ಇದಾಗಿದ್ದು, ಯುಎಸ್ ವಿರೋಧದ ನಡುವೆಯೂ ಈ ಒಪ್ಪಂದವನ್ನು ಮುಂದುವರೆಸಲು ಭಾರತ ನಿರ್ಧರಿಸಿದೆ.
ಈ ಒಪ್ಪಂದಕ್ಕೆ ಸಹಿ ಯಾವಾಗ ಬೀಳಲಿದೆ ಎಂಬುದನ್ನು ಸೀತಾರಾಮನ್ ಸ್ಪಷ್ಟಪಡಿಸಿಲ್ಲವಾದರೂ ಒಪ್ಪಂದ ಬಹುತೇಕ ಅಂತಿಮ ಘಟ್ಟದಲ್ಲಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಇದೇ ಅಕ್ಟೋಬರ್ನಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಪ್ರಧಾನಿ ಮೋದಿಯವರು ಭೇಟಿಯಾಗಲಿದ್ದು ಈ ವೇಳೆ S400 ಏರ್ ಡಿಫೆನ್ಸ್ ಖರೀದಿ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.