ಚಂಡಿಗಢ: ಹರ್ಯಾಣಾ ಸರ್ಕಾರ ಅತಿಥಿ ಶಿಕ್ಷಕರ ವೇತನವನ್ನು ಶೇ.20ರಿಂದ 25ರಷ್ಟು ಏರಿಕೆ ಮಾಡಲು ನಿರ್ಧರಿಸಿದೆ, ಅಲ್ಲದೆ ವರ್ಷಕ್ಕೆ ಎರಡು ಬಾರಿಯಂತೆ ಜನೇವರಿ ಮತ್ತು ಜುಲೈ ತಿಂಗಳುಗಳಲ್ಲಿ ಅವರ ವೇತನವನ್ನು ಪರಿಷ್ಕರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಪ್ರಸ್ತುತ ಚಿತ್ರಕಲಾ ಶಿಕ್ಷಕರಾಗಿ, ಶಾಲಾ ಶಿಕ್ಷಕರಾಗಿ ಮತ್ತು ಬೋಧಕರಾಗಿ ಕಾರ್ಯನಿರ್ವಹಿಸುವ ಅತಿಥಿ ಶಿಕ್ಷಕರ ವೇತನ 24ಸಾವಿರದಿಂದ 30ಸಾವಿರದವರೆಗೆ ಇದ್ದು, 2018ರ ಜುಲೈ 01ಕ್ಕೆ ಅನ್ವಯವಾಗುವಂತೆ ಅವರ ವೇತನ 36ಸಾವಿರದವರೆಗೆ ಏರಿಕೆಯಾಗಲಿದೆ.
ಅತಿಥಿ ಶಿಕ್ಷಕರ ಸಂಘಟನೆಯೊಂದಿಗೆ ಸಿಎಂ ಮನೋಹರಲಾಲ್ ಖಟ್ಟರ್ ನಡೆಸಿದ ಸಭೆಯಲ್ಲಿ ವೇತನವನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರದಿಂದಾಗಿ ನೂರಾರು ಸಂಖ್ಯೆಯಲ್ಲಿರುವ ಅತಿಥಿ ಶಿಕ್ಷಕರಿಗೆ ಪ್ರಯೋಜನವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.