ನವದೆಹಲಿ: ಅಲಿಬಾಬಾ ಗ್ರುಪ್ ಮುಖ್ಯಸ್ಥ ಜಾಕ್ ಮಾ ಅವರನ್ನು ಹಿಂದಿಕ್ಕಿ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಮುಖ್ಯಸ್ಥ ಮುಖೇಶ್ ಅಂಬಾನಿಯವರು ಏಷ್ಯಾದ ಅತೀ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಶುಕ್ರವಾರ ರಿಲಾಯನ್ಸ್ ಇಂಡಸ್ಟ್ರೀಯ ಷೇರುಗಳು 1.6%ರಷ್ಟು ಏರಿಕೆ ಕಂಡ ಹಿನ್ನಲೆಯಲ್ಲಿ ಅಂಬಾನಿಯವರ ಅಂದಾಜು ಆಸ್ತಿ ಮೊತ್ತ 44.3 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ಜಾಕ್ ಮಾ ಅವರ ಆಸ್ತಿ 44 ಬಿಲಿಯನ್ ಡಾಲರ್ ಆಗಿದೆ.
ಪೆಟ್ರೋ ಕೆಮಿಕಲ್ನಿಂದ ಟೆಲಿಕಾಂ ಉದ್ಯಮಗಳು ರಿಲಾಯನ್ಸ್ ಮುಖ್ಯಸ್ಥರ ಆಸ್ತಿಗೆ ಈ ವರ್ಷ ಸುಮಾರು 4 ಬಿಲಿಯನ್ ಡಾಲರ್ಗಳಷ್ಟು ಕೊಡುಗೆ ನೀಡಿದೆ. ಶುಕ್ರವಾರದ ಬೆಳಗಿನ ಟ್ರೆಂಡ್ನಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ನ ಮಾರುಕಟ್ಟೆ ಮೌಲ್ಯ ರೂ.7 ಲಕ್ಷ ಕೋಟಿ ಮಟ್ಟಕ್ಕೇರಿದೆ. ಈ ತಿಂಗಳು ಅಂಬಾನಿಯವರು ಫಿಕ್ಸಡ್ ಲೈನ್ಗಳು, ಬ್ರಾಡ್ಬ್ಯಾಂಡ್ ಸೇವೆ, ಜಿಯೋ ಗೀಗಾಫೈಬರ್ನ್ನು ಘೋಷಣೆ ಮಾಡಿದ್ದಾರೆ. ಇದರಿಂದ ಅವರ ಉದ್ಯಮ ಸಾಮ್ರಾಜ್ಯ ಇನ್ನಷ್ಟು ವಿಸ್ತರಣೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.