ನವದೆಹಲಿ: ಕೋಟ್ಯಾಂತರ ಫೇಸ್ಬುಕ್ ಬಳಕೆದಾರರಿಗೆ ಪ್ರಯೋಜನವಾಗುವಂತಹ ಹೊಸ ಫೀಚರ್ವೊಂದನ್ನು ಕಾರ್ಯರೂಪಕ್ಕೆ ತರಲು ಫೇಸ್ಬುಕ್ ಸಂಸ್ಥೆ ಪ್ರಯತ್ನಿಸುತ್ತಿದೆ.
ಫೇಕ್ ಅಕೌಂಟ್ನಿಂದ ಸಂದೇಶಗಳು ಬಂದಾಗ ಈ ಫೀಚರ್ ನಮಗೆ ತಿಳಿಯಪಡಿಸುತ್ತದೆ. ಫೇಸ್ಬುಕ್ನ ಡೈರೆಕ್ಟ್ ಮಸೇಜ್ನಲ್ಲಿ ಈ ಫೀಚರ್ ಲಭ್ಯವಾಗಲಿದೆ, ಅಪರಿಚಿತ ಕಾಂಟ್ಯಾಕ್ಟ್ಗಳ ಹೆಚ್ಚುವರಿ ಮಾಹಿತಿಯನ್ನೂ ಇದು ಒದಗಿಸಲಿದೆ.
ಯಾವಾಗ ಅಕೌಂಟ್ ರಚನೆಯಾಯಿತು, ಯಾವ ದೇಶದಲ್ಲಿ ರಚನೆಯಾಯಿತು? ಫೋನ್ ನಂಬರ್ ಬಳಸಿ ಆ ವ್ಯಕ್ತಿ ಫೇಸ್ಬುಕ್ ಅಕೌಂಟ್ ಬಳಸುತ್ತಿದ್ದಾನೆಯೇ? ಎಂಬಿತ್ಯಾದಿ ಮಾಹಿತಿಗಳನ್ನು ಈ ಫೀಚರ್ ನೀಡಲಿದೆ.
ಈ ಫೀಚರ್ನ್ನು ಫೇಸ್ಬುಕ್ ಟೆಸ್ಟಿಂಗ್ ಮಾಡುತ್ತಿದ್ದು, ಶೀಘ್ರದಲ್ಲೇ ಕಾರ್ಯರೂಪಕ್ಕೆ ತರುವ ನಿರೀಕ್ಷೆ ಇದೆ. ಫೇಕ್ ಅಕೌಂಟ್ಗಳಿಂದ ಹಲವಾರು ಆವಾಂತರಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಇಂತಹದ್ದೊಂದು ಫೀಚರ್ ಹೊರ ತರುವುದು ಅನಿವಾರ್ಯ ಎನಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.