ನವದೆಹಲಿ: ರಾಷ್ಟ್ರೀಯ ಕ್ರೀಡಾ ಮಂಡಳಿ ‘ಸ್ಪೋಟ್ಸ್ ಅಥಾರಿಟಿ ಆಫ್ ಇಂಡಿಯಾ’ದ ಹೆಸರು ಶೀಘ್ರದಲ್ಲೇ ‘ಸ್ಪೋರ್ಟ್ಸ್ ಇಂಡಿಯಾ’ ಆಗಿ ಬದಲಾಗಲಿದೆ ಎಂದು ಕ್ರೀಡಾ ಮತ್ತು ಯುವಜನ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಘೋಷಿಸಿದ್ದಾರೆ.
ರಾಷ್ಟ್ರೀಯ ಕ್ರೀಡಾ ಮಂಡಳಿಯ ಆಡಳಿತ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ, ಅಥಾರಿಟಿ ಎಂಬ ಶಬ್ದವನ್ನು ಕೈಬಿಟ್ಟು ಕೇವಲ ‘ಸ್ಪೋಟ್ಸ್ ಇಂಡಿಯಾ’ ಎಂದು ಬದಲಾಯಿಸಲಾಗುತ್ತಿದೆ.
ಕ್ರೀಡಾ ವಲಯದಲ್ಲಿ ಅಥಾರಿಟಿ ಎಂಬುದು ಪ್ರಸ್ತುತವಲ್ಲ, ಹೀಗಾಗಿ ಅದನ್ನು ತೆಗೆದು ಹಾಕುತ್ತಿದ್ದೇವೆ ಎಂದು ಸಚಿವರು ಹೇಳಿದ್ದಾರೆ.
ದೇಶದ ಕ್ರೀಡೆಯ ಉನ್ನತೀಕರಣಕ್ಕಾಗಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ, ಕ್ರೀಡಾಳುಗಳಿಗೆ ಆಹಾರದ ವೆಚ್ಚಕ್ಕೆ ನಿಡುವ ಹಣವನ್ನು ಏರಿಕೆ ಮಾಡಲು ಚಿಂತಿಸಲಾಗಿದೆ, ಇದಕ್ಕಾಗಿ ಸಮಿತಿಯನ್ನು ರಚಿಸಲಾಗುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.