×
Home About Us Advertise With s Contact Us

ಕಲ್ಲು ತೂರಾಟಗಾರರನ್ನು ಹತ್ತಿಕ್ಕಲು ಸಜ್ಜಾಗಿದೆ ಸಿಆರ್‌ಪಿಎಫ್ ಮಹಿಳಾ ಪಡೆ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಹಿಳೆಯರು ಕೂಡ ಈ ಗುಂಪಿಗೆ ಸೇರಿಕೊಂಡು ಭದ್ರತಾ ಪಡೆಗಳ ವಿರುದ್ಧ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಇವರನ್ನು ಹತ್ತಿಕ್ಕಲು ಸಿಆರ್‌ಪಿಎಫ್ ತರಬೇತಿ ಹೊಂದಿದ ಮಹಿಳಾ ಕಮಾಂಡೋಗಳನ್ನು ನಿಯೋಜನೆಗೊಳಿಸಲು ಮುಂದಾಗಿದೆ.

ಈ ಮಹಿಳಾ ಕಮಾಂಡೋಗಳಿಗೆ ಕಠಿಣಾತಿ ಕಠಿಣ ತರಬೇತಿಯನ್ನು ನೀಡಲಾಗುತ್ತಿದೆ, ಕತ್ತಲಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುವಂತೆ ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ ಹೋರಾಡಲು ತರಬೇತಿ ನೀಡಲಾಗುತ್ತಿದೆ. ಶಸ್ತ್ರಾಸ್ತ್ರಗಳು ಕೈಕೊಟ್ಟ ಸಂದರ್ಭ ಅವುಗಳನ್ನು ನಿಮಿಷದೊಳಗೆ ಸರಿಪಡಿಸುವ ಕಲೆಯನ್ನೂ ಕಲಿಸಲಾಗುತ್ತಿದೆ.

ಕಲ್ಲು ತೂರಾಟಗಾರರನ್ನು ಹತ್ತಿಕ್ಕುವುದು ಭದ್ರತಾ ಪಡೆಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೂಡ ಈ ಗುಂಪನ್ನು ಸೇರಿಕೊಳ್ಳುತ್ತಿರುವುದು ಇನ್ನಷ್ಟು ದೊಡ್ಡ ಸವಾಲಾಗಿದೆ. ಈ ಹಿನ್ನಲೆಯಲ್ಲಿ ಮಹಿಳಾ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲು ಅನಿವಾರ್ಯ ಎನಿಸಿದೆ.

 

 

 

 

 

 

 

 

Recent News

Back To Top
error: Content is protected !!