ನವದೆಹಲಿ : ಭಾರತದ ಪ್ರಸಿದ್ಧ ಕಾದಂಬರಿಕಾರ, ಅಂಕಣಕಾರ, ಸಿನೆಮಾ ಸ್ಕ್ರೀನ್ ಪ್ಲೇ ಬರಹಗಾರ ಚೇತನ್ ಭಗತ್ ಅವರು ದಿನಾಂಕ 28/06/18 ರಂದು ಟ್ವೀಟ್ ಮಾಡಿರುವ ಇವರು, ಶತಾಬ್ದಿ ರೈಲಿನ ಮೂಲಕ ಇತ್ತೀಚೆಗೆ ಭಾರತೀಯ ರೈಲ್ವೇಯು ಇತ್ತೀಚೆಗೆ ಅಳವಡಿಸಿದ ಅತ್ಯಾಧುನಿಕ ಅನುಭೂತಿ ಕ್ಲಾಸ್ನಲ್ಲಿ ಅಹಮ್ಮದಾಬಾದ್ನಿಂದ ಮುಂಬೈಗೆ ಪ್ರಯಾಣಿಸಿ ಭಾರತೀಯ ರೈಲ್ವೇಯ ಹೊಸ ಸೇವೆಯನ್ನು ಬಾಯ್ತುಂಬಾ ಹೊಗಳಿದ್ದಾರೆ.
Took 12010 Shatabdi from Ahmedabad to Mumbai. Tried the new Anubhuti class. Super clean cabins (cleaned 4 times during trip), great food, v nice seats and excellent service. Felt like a joy trip. Best Railways product so far. Skip the plane, take the train! pic.twitter.com/cOqY10PFqJ
— Chetan Bhagat (@chetan_bhagat) June 28, 2018
ಅನುಭೂತಿ ಕೋಚ್ನ ಸ್ವಚ್ಛತೆ(ಅವರ ಪ್ರಯಾಣದ ಅವಧಿಯಲ್ಲಿ ಅವರ ಕೋಚ್ನ್ನು 4 ಬಾರಿ ಸ್ವಚ್ಛ ಮಾಡಲಾಗಿದೆಯಂತೆ), ರುಚಿಕರ ಆಹಾರ, ಸುಖಾಸನ ಎಲ್ಲದರ ಬಗ್ಗೆಯೂ ಪ್ರಶಂಸೆಯ ಮಳೆ ಹರಿಸಿದ್ದಾರೆ. ಅನುಭೂತಿಯು ಭಾರತೀಯ ರೈಲ್ವೇಯ ಅತ್ಯುತ್ತಮ ಕೊಡುಗೆಯಾಗಿದ್ದು ವಿಮಾನದಲ್ಲಿ ಪ್ರಯಾಣಿಸುವ ಬದಲು ಇದರಲ್ಲೇ ಪ್ರಯಾಣಿಸುವುದು ಹಿತಕರ ಎಂದು ಜನರಿಗೆ ಕರೆಕೊಟ್ಟಿದ್ದಾರೆ.
ಮೋದಿ ಸರಕಾರವು ಭಾರತೀಯ ರೈಲ್ವೇಯನ್ನು ಅತ್ಯಂತ ಜನಸ್ನೇಹೀ ಸಾರಿಗೆ ವ್ಯವಸ್ಥೆಯನ್ನಾಗಿ ಪರಿವರ್ತಿಸುತ್ತಿದೆ. ಸುರಕ್ಷತೆಗೆ ಹಾಗೂ ಸ್ವಚ್ಛತೆಗೆ ಆದ್ಯತೆ, ಸಮಯಪಾಲನೆ, ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಆಹಾರದ ಪೂರೈಕೆ, ಹೆಚ್ಚಿಸಿಕೊಂಡ ವೇಗ, ಪ್ರಯಾಣಿಕರ ಬವಣೆಗಳಿಗೆ ತಕ್ಷಣದ ಸ್ಪಂದನೆ ಮುಂತಾದ ಧನಾತ್ಮಕ ಬದಲಾವಣೆಯ ಕಾರಣ ರೈಲ್ವೇಯು ಜನರ ಪ್ರಶಂಸೆಗೆ ಭಾಜನವಾಗುತ್ತಿದೆ.
ಚೇತನ್ ಭಗತ್ ಬರೆದ ಹಾಫ್ ಗರ್ಲ್ ಫ್ರೆಂಡ್, ಥ್ರೀ ಈಡಿಯೆಟ್ಸ್, ಟೂ ಸ್ಟೇಟ್ಸ್, ಕಿಕ್, ಕಾಯ್ ಪೋ ಚೇ, ಹೆಲ್ಲೋ ಮುಂತಾದ ಇಂಗ್ಲೀಷ್ ಕಾದಂಬರಿಗಳ ಲಕ್ಷಾಂತರ ಪ್ರತಿಗಳು ಮಾರಾಟವಾಗಿ ಜನಪ್ರಿಯವಾಗಿವೆ. ಥ್ರೀ ಈಡಿಯೆಟ್ಸ್, ಕಾಯ್ ಪೋ ಚೇ, ಟೂ ಸ್ಟೇಟ್ಸ್ಗಳು ಸಿನಿಮಾಗಳಾಗಿಯೂ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಯನ್ನು ಬರೆದಿವೆ. ಸಾಮಾಜಿಕ ಮಾಧ್ಯಮದಲ್ಲಿ ಅದರಲ್ಲೂ ಟ್ವೀಟ್ಟರ್ ನಲ್ಲಿ 1.2 ಕೋಟಿ ಹಿಂಬಾಲಕರನ್ನು ಹೊಂದಿರುವ ಚೇತನ್ ಭಗತ್ ನೇರ ಹಾಗೂ ಪ್ರಾಮಾಣಿಕ ನುಡಿಗಳಿಗೆ ಹೆಸರು ಮಾಡಿದವರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.