ತಿರುವನಂತಪುರಂ: ಕೇರಳದ ಸರ್ಕಾರಿ ಶಾಲೆಯ ಪ್ರಿನ್ಸಿಪಾಲ್ವೊಬ್ಬರು ಮಕ್ಕಳಿಗೆ ಕುಂಕುಮ ಹಾಕದಂತೆ, ದಾರಗಳನ್ನು ಕಟ್ಟದಂತೆ ನಿಯಮ ವಿಧಿಸಿ ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಪೋಷಕರು ಪ್ರತಿಭಟನೆಗಿಳಿದಿದ್ದಾರೆ.
ಪಲ್ಲಕ್ಕಾಡ್ ಜಿಲ್ಲೆಯ ಸರ್ಕಾರಿ ಶಾಲೆಯ ಪ್ರಿನ್ಸಿಪಾಲ್, ಮಕ್ಕಳಿಗೆ ಕುಂಕುಮ, ದಾರ ಕಟ್ಟದಂತೆ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಒಂದು ವೇಳೆ ಈ ನಿಯಮ ಪಾಲಿಸದೆ ಹೋದರೆ ಶಾಲೆಯಿಂದ ಉಚ್ಛಾಟಿಸುವ ಬೆದರಿಕೆ ಹಾಕಿದ್ದಾರೆ. ಶಾಲೆಯೊಳಗೆ ಯಾವುದೇ ಧಾರ್ಮಿಕ ಸಂಕೇತಗಳನ್ನು ನಾವು ಒಪ್ಪುವುದಿಲ್ಲ ಎಂದು ಮಕ್ಕಳ ಪೋಷಕರಿಗೆ ಹೇಳಿದ್ದಾರೆ.
ಪ್ರಾಂಶುಪಾಲರ ಈ ಸರ್ವಾಧಿಕಾರಿ ಧೋರಣೆಯನ್ನು ಪೋಷಕರು ಕಟುವಾಗಿ ಖಂಡಿಸಿದ್ದು, ಸಂವಿಧಾನ ಬದ್ಧವಾದ ಧಾರ್ಮಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಪುಟಾಣಿ ಮಕ್ಕಳ ಶಿಕ್ಷಣದಲ್ಲಿ ಕೋಮುವಾದದ ಅಜೆಂಡಾ ತುಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ.
ಇದು ಸರ್ಕಾರಿ ಶಾಲೆಯಾಗಿದ್ದು, ಯಾವುದೇ ಧರ್ಮಗಳಿಗೆ ಸೇರಿದ ಸಂಸ್ಥೆಯಲ್ಲ. ಹೀಗಾಗಿ ಭಾರತದ ವಿವಿಧತೆಯನ್ನು ಪಾಲಿಸುವ ಅವಕಾಶ ಇಲ್ಲಿನ ಮಕ್ಕಳಿಗೆ ಸಿಗಬೇಕು ಎಂದು ಹೋರಾಟಗಾರರು ಪ್ರತಿಪಾದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.