ಶ್ರೀನಗರ: ಭಾರತದೊಳಗೆ ಒಳನುಸುಳಲು ಪ್ರಯತ್ನಿಸುತ್ತಿರುವ ಪಾಕಿಸ್ಥಾನದ ಉಗ್ರರನ್ನು ಸದೆ ಬಡಿಯಲು ಬಿಎಸ್ಎಫ್ ಬಳಿ ಬಲಿಷ್ಠ ಸ್ನಿಪರ್ಸ್ ಪಡೆಯಿದೆ. ದಟ್ಟ ಅರಣ್ಯ ಪ್ರದೇಶದೊಳಗಿನಿಂದ ಒಳನುಸುಳುವ ಉಗ್ರರನ್ನು ಈ ಯೋಧರ ಪಡೆ ಹತ್ತಿಕ್ಕುತ್ತದೆ.
ಅರಣ್ಯದಲ್ಲಿ ಕಾರ್ಯಾಚರಣೆ ನಡೆಸುವ ವೇಳೆ ಗಿಡ ಮರ, ಎಲೆಗಳಂತಹ ಪೋಷಾಕು ತೊಟ್ಟು ಇವರು ಉಗ್ರರ ವಿರುದ್ಧ ಹೋರಾಡುತ್ತಾರೆ.
ಮಧ್ಯಪ್ರದೇಶದ ಸೆಂಟ್ರಲ್ ಸ್ಕೂಲ್ ಆಫ್ ವೆಪನ್ ಆಂಡ್ ಟ್ಯಾಕ್ಟಿಸ್ನಲ್ಲಿ ಇವರಿಗೆ ತರಬೇತಿ ನೀಡಲಾಗುತ್ತದೆ. ಪ್ರತಿ 100 ತರಬೇತು ಪಡೆಯುವವರಲ್ಲಿ ಒಬ್ಬರನ್ನು ಸ್ನಿಪರ್ ಆಗಿ ನೇಮಿಸಲಾಗುತ್ತದೆ. 60 ದಿನಗಳ ಕಾಲ ಇವರು ಕಠಿಣಾತಿ ಕಠಿಣ ತರಬೇತಿಯನ್ನು ಇವರಿಗೆ ನೀಡಲಾಗುತ್ತದೆ.
ಭಯೋತ್ಪಾದಕರ ಚಲನವಲನಗಳನ್ನು ಅರ್ಥೈಸಿ, ಸೂಕ್ತ ಪ್ರದೇಶದಲ್ಲಿ ಅವಿತು ಕುಳಿತು ಶತ್ರುಗಳ ವಿರುದ್ಧ ಇವರು ದಾಳಿ ನಡೆಸುತ್ತಾರೆ. ಕೆಲವೊಮ್ಮೆ ಉಗ್ರರಿರುವ ಜಾಗಗಳಿಗೆಯೇ ತೆರಳಿ ಇವರು ದಾಳಿಯನ್ನು ನಡೆಸುತ್ತಾರೆ. ಅಪಾಯಕಾರಿ ವಾತಾವರನ ಇದ್ದರೂ ಎದೆಗುಂದದೆ ಮುನ್ನುಗ್ಗುವುದು ಇವರ ಜಾಯಮಾನವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.