×
Home About Us Advertise With s Contact Us

ಫಿಫಾ ವರ್ಲ್ಡ್ ಕಪ್ ಆರಂಭಕ್ಕೆ ಗೂಗಲ್ ಡೂಡಲ್ ಶುಭಾಶಯ

ನವದೆಹಲಿ: ಫಿಫಾ ವರ್ಲ್ಡ್‌ಕಪ್ ಇಂದಿನಿಂದ ರಷ್ಯಾದಲ್ಲಿ ಆರಂಭಗೊಳ್ಳಲಿದೆ. ವಿಶ್ವದ ಅತೀ ಜನಪ್ರಿಯ ಕ್ರೀಡಾಕೂಟಕ್ಕೆ ಗೂಗಲ್ ಡೂಡಲ್ ಮೂಲಕ ಸ್ವಾಗತಕೋರಿದೆ.

ಗೂಗಲ್‌ನ ಇಂದಿನ ಡೂಡಲ್ ಅತ್ಯಂತ ಸುಂದರವಾಗಿ ಮೂಡಿಬಂದಿದ್ದು, ಫಿಫಾದಲ್ಲಿ ಭಾಗಿಯಾಗುತ್ತಿರುವ 32 ರಾಷ್ಟ್ರಗಳ ಆನಿಮೇಟೆಡ್ ಅಭಿಮಾನಿಗಳನ್ನು, ಅವರ ಸಂಸ್ಕೃತಿಯನ್ನು ಬಿಂಬಿಸಿದೆ. ಜಗತ್ತಿನ ಒಗ್ಗಟ್ಟು ಮತ್ತು ಸೌಹಾರ್ದತೆಯನ್ನು ತೋರಿಸುವ ಪ್ರಯತ್ನವೂ ಇದರಲ್ಲಿದೆ. ಕ್ರೀಡಾ ಸ್ಫೂರ್ತಿಗೆ ಡೂಡಲ್ ಸೆಲ್ಯೂಟ್ ಹೇಳಿದೆ.

ಈ ಡೂಡಲ್‌ ಅನ್ನು ಗ್ಲೂಕಿಟ್ ಅವರ ಕೈ ಚಳಕದಲ್ಲಿ ಮೂಡಿ ಬಂದಿದೆ.

ಫಿಫಾ ವಲ್ಡ್‌ಕಪ್ 2018 ವಿಶ್ವದ ಅತೀ ವೀಕ್ಷಿತ ಕ್ರೀಡಾಕೂಟವಾಗಲಿದೆ ಎಂದು ನಿರೀಕ್ಷಿಸಲಾಗಿದ್ದು, ಜೂನ್ 14ರಿಂದ ಜುಲೈ 15ರವರೆಗೆ ರಷ್ಯಾದ 12 ವಿವಿಧ ಸ್ಥಳಗಳಲ್ಲಿ ಜರುಗಲಿದೆ.

 

 

 

 

 

 

 

 

Recent News

Back To Top
error: Content is protected !!