ಪೋರ್ಬಂದರ್: ಯಮೆನ್ನ ಮೆಕುನು ಸೈಕ್ಲೋನ್ ಪೀಡಿತ ಪ್ರದೇಶದಿಂದ 38 ಭಾರತೀಯರನ್ನು ರಕ್ಷಣೆ ಮಾಡಿರುವ ಭಾರತೀಯ ನೌಕಾ ಹಡಗು ಸುನೈನಾ ತನ್ನ ಕಾರ್ಯವನ್ನು ಯಶಸ್ವಿಗೊಳಿಸಿ ಗುರುವಾರ ಗುಜರಾತ್ನ ಪೋರಬಂದರ್ಗೆ ಬಂದು ತಲುಪಿದೆ.
38 ಭಾರತೀಯರನ್ನು ಹೊತ್ತು ನೌಕೆ ಪೋರಬಂದರನ್ನು ಪ್ರವೇಶಿಸಿದ್ದು, ಅಡ್ಮಿರಲ್ ಸಂಜಯ್ ರಾಯ್ ಅದನ್ನು ಸ್ವಾಗತಿಸಿದರು ಎಂಬುದಾಗಿ ನೌಕಾದಳ ಪ್ರಕಟನೆಯಲ್ಲಿ ತಿಳಿಸಿದೆ.
ಭಾರತೀಯ ನಾಗರಿಕರನ್ನು ಕಡ್ಡಾಯ ಕಸ್ಟಮ್ಸ್ ಕ್ಲಿಯರೆನ್ಸ್ ಮತ್ತು ಇಮಿಗ್ರೇಶನ್ ಚೆಕ್ಸ್ಗೆ ಒಳಪಡಿಸಲಾಗುತ್ತಿದೆ. ಪ್ರಕ್ರಿಯೆಗಳು ಮುಕ್ತಾಯವಾದ ಬಳಿಕ ಅವರನ್ನು ಅವರ ಊರಿಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದೆ.
ಯೆಮೆನ್ನ ಸಕೋಟ್ರಾದಲ್ಲಿ ಮೆಕುನು ಚಂಡಮಾರುತ ಸಂಭವಿಸಿ ಹಲವಾರು ಮಂದಿ ಜೀವ ಕಳೆದುಕೊಂಡಿದ್ದರು. ಅಲ್ಲಿ ಸಿಲುಕಿಕೊಂಡಿದ್ದ ಭಾರತೀಯರ ರಕ್ಷಣೆಗಾಗಿ ನೌಕಾದಳ ಸುನೈನಾ ಹಡಗಿನ ಮೂಲಕ ‘ನಿಸ್ತಾರ್’ ಅಪರೇಶನ್ ಆರಂಭಿಸಿತ್ತು. ಅದು ಯಶಸ್ಸುಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.