ರಾಯ್ಪುರ್: ಛತ್ತೀಸ್ಗಢದ ಬಿಜಾಪುರ ಜಿಲ್ಲೆಯ ಸುಕ್ಮಾ ಪ್ರದೇಶದಲ್ಲಿ ಐದು ತಿಂಗಳುಗಳಲ್ಲಿ ಒಟ್ಟು 51 ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಸುಕ್ಮಾ ಎಸ್ಪಿ ಅಭಿಷೇಕ್ ಮೀನಾ ತಿಳಿಸಿದ್ದಾರೆ.
2017ರ ನವೆಂಬರ್ನಿಂದ 2018ರ ಮಾರ್ಚ್ವರೆಗೆ 51 ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂಬ ಬಗ್ಗೆ ಅಂಕಿಅಂಶಗಳನ್ನು ಅವರು ನೀಡಿದ್ದಾರೆ.
ಈ ಅವಧಿಯಲ್ಲಿ ಪುಜರಿ ಕನ್ಕೆರ್ನಲ್ಲಿ 10 ಎನ್ಕೌಂಟರ್ಗಳನ್ನು ಮಾಡಲಾಗಿತ್ತು, ಕೊಂಟ, ವೆಸ್ಟ್ ಬಸ್ತರ್, ಜಗರ್ಗುಂಡಗಳಲ್ಲಿ 9 ಎನ್ಕೌಂಟರ್ ನಡೆಸಲಾಗಿತ್ತು, ಕಿಸ್ತರಾಮ್ನಲ್ಲಿ 8, ಕೆರ್ಲಪಲ್ನಲ್ಲಿ 3, ಪಮೆದ್ನಲ್ಲಿ 2, ದರ್ಬಾದಲ್ಲಿ 1 ಎನ್ಕೌಂಟರ್ಗಳನ್ನು ನಡೆಸಲಾಗಿತ್ತು. ಇದರಲ್ಲಿ 51 ಮಂದಿ ನಕ್ಸಲರು ಹತರಾಗಿದ್ದರು.
2018ರ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಇಪೆಂತ, ಪುತ್ಪಲ್ಲಿ, ಮಿತ್ತಗುಡೆಂ, ತುಮಿರ್ಪಾದ್ಗಳಲ್ಲಿ ಎನ್ಕೌಂಟರ್ಗಳನ್ನು ನಡೆಸಲಾಗಿತ್ತು. ಇದರಲ್ಲಿ ಮೃತಪಟ್ಟ ನಕ್ಸಲರ ಸಂಖ್ಯೆಯನ್ನು ಬಹಿರಂಗಪಡಿಸಲಾಗಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.