ವಾರಣಾಸಿ: ಉತ್ತರಪ್ರದೇಶದ ವಾರಣಾಸಿಯಿಂದ 26 ಕಿಮೀ ದೂರದಲ್ಲಿರುವ ಬಬತ್ಪುರದಲ್ಲಿನ ಲಾಲ್ ಬಹುದ್ದೂರ್ ಶಾಸ್ತ್ರೀ ಇಂಟರ್ನ್ಯಾಷನಲ್ ಏರ್ಪೋರ್ಟ್ ಶೀಘ್ರದಲ್ಲೇ ಅಂಡರ್ಪಾಸ್ ರಾಷ್ಟ್ರೀಯ ಹೆದ್ದಾರಿಯನ್ನು ಹೊಂದಿರುವ ದೇಶದ ಮೊತ್ತ ಮೊದಲ ಏರ್ಪೋರ್ಟ್ ಎನಿಸಿಕೊಳ್ಳಲಿದೆ.
ಅಂಡರ್ಪಾಸ್ನಲ್ಲಿ ಹೆದ್ದಾರಿ ಇರುವುದರಿಂದ ಏರ್ಪೋರ್ಟ್ಗೆ ವಿಸ್ತರಣಾ ಯೋಜನೆ ಹಮ್ಮಿಕೊಳ್ಳಲು ಸಹಾಯಕವಾಗುತ್ತದೆ ಮತ್ತು ಹೆಚ್ಚಿನ ವಿಮಾನಗಳು ಲ್ಯಾಂಡ್ ಆಗಬಹುದಾಗಿದೆ. ಹೆದ್ದಾರಿ ನಾಲ್ಕು ಲೇನ್ಗಳಾಗಿ ಪರಿವರ್ತನೆಗೊಳ್ಳಲಿದೆ.
ಏರ್ಪೋಟ್ ಅಥಾರಿಟಿ ಆಫ್ ಇಂಡಿಯಾ ಇದಕ್ಕೆ ಅನುಮೋದನೆಯನ್ನು ನೀಡಿದೆ. ಪ್ರಸ್ತುತ ಈ ಏರ್ಪೋರ್ಟ್ 2,750 ಕಿಮೀ ರನ್ವೇ ಹೊಂದಿದ್ದು, ಇದನ್ನು 4,057ಕ್ಕೆ ವಿಸ್ತರಣೆಗೊಳಿಸಲಾಗುತ್ತಿದೆ. ಇದರಿಂದ ದೊಡ್ಡ ಬೋಯಿಂಗ್, ಕಾರ್ಗೋ ಏರ್ಕ್ರಾಫ್ಟ್ಗಳು ಲ್ಯಾಂಡ್ ಆಗಲು ಸಹಾಯಕವಾಗಲಿದೆ. ರನ್ವೇ ವಿಸ್ತರಣೆ ಮತ್ತು ಅಂಡರ್ಪಾಸ್ ಹೆದ್ದಾರಿ ಕಾಮಗಾರಿ ಏಕಕಾಲಕ್ಕೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜರ್ಮನಿಯ ಲೀಪ್ಝಿಗ್ ಏರ್ಪೋರ್ಟ್ ಇದೇ ತರನಾದ ಅಂಡರ್ ಪಾಸ್ ಹೆದ್ದಾರಿಯನ್ನು ಹೊಂದಿದ್ದು, ಇಲ್ಲಿ ಏರ್ಪೋರ್ಟ್ನ ಬಹುತೇಕ ಕಟ್ಟಡ ಹೈವೇನಲ್ಲಿದ್ದು, ಏರ್ಕ್ರಾಫ್ಟ್ ಓವರ್ಪಾಸ್ಗಳನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.