ನವದೆಹಲಿ: ಬೇನಾಮಿ ಅಥವಾ ಆಸ್ತಿ ಅವ್ಯವಹಾರಗಳ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದರೆ ರೂ.1 ಕೋಟಿ, ಅದೇ ವಿದೇಶದಲ್ಲಿ ಕಪ್ಪುಹಣ ಇಟ್ಟ ಬಗ್ಗೆ ಮಾಹಿತಿ ಬಹಿರಂಗಪಡಿಸಿದರೆ ರೂ.5 ಕೋಟಿಯಷ್ಟು ಹಣವನ್ನು ಗಳಿಸುವ ಅವಕಾಶ ಜನಸಾಮಾನ್ಯರಿಗೆ ಸಿಕ್ಕಿದೆ.
ಗಣನೀಯ ಪ್ರಮಾಣದಲ್ಲಿ ಆದಾಯ, ಆಸ್ತಿ ತೆರಿಗೆಯನ್ನು ವಂಚಿಸುತ್ತಿರುವವರ ಬಗ್ಗೆ ಮಾಹಿತಿಯನ್ನು ನೀಡಿದರೆ ವ್ಯಕ್ತಿಯೂ ರೂ.50ಲಕ್ಷದವರೆಗೆ ಬಹುಮಾನವನ್ನು ಪಡೆದುಕೊಳ್ಳುವ ಅವಕಾಶವನ್ನು ಆದಾಯ ತೆರಿಗೆ ಇಲಾಖೆ ಕಲ್ಪಿಸಿದೆ.
2018ರ ಬೇನಾಮಿ ಅವ್ಯವಹಾರ ಮಾಹಿತಿದಾರರ ಪುರಸ್ಕಾರ ಯೋಜನೆಯಡಿ ವಿದೇಶಿಗ ಸೇರಿದಂತೆ ಯಾವುದೇ ವ್ಯಕ್ತಿಯು ಜಂಟಿ ಅಥವಾ ಹೆಚ್ಚುವರಿ ಕಮಿಷನರ್ ಅವರಿಗೆ ಬೇನಾಮಿ ವ್ಯವಹಾರ ಅಥವಾ ಆಸ್ತಿ ಅವ್ಯಹಾರದ ಬಗ್ಗೆ ಮಾಹಿತಿಯನ್ನು ನೀಡಿದರೆ ಆತನಿಗೆ ಪುರಸ್ಕಾರವನ್ನು ನೀಡಲಾಗುತ್ತದೆ ಎಂದು ಸಿಬಿಡಿಟಿ ಘೋಷಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.