ನವದೆಹಲಿ: ಇಂಡೋನೇಷ್ಯಾಗೆ ಪ್ರವಾಸ ಹಮ್ಮಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ನಾಗರಿಕರಿಗೆ 30 ದಿನಗಳ ಉಚಿತ ಭಾರತ ವೀಸಾವನ್ನು ಘೋಷಿಸಿದ್ದಾರೆ. ನಮ್ಮ ನೆಲಕ್ಕೆ ಆಗಮಿಸಿ ‘ನವ ಭಾರತ’ದ ಅನುಭವವನ್ನು ಪಡೆದುಕೊಳ್ಳಿ ಎಂದು ಆಹ್ವಾನಿಸಿದ್ದಾರೆ.
ಜರ್ಕಾತದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಮ್ಮ ದೇಶಗಳ ಹೆಸರುಗಳಲ್ಲಿ ಮಾತ್ರ ಪ್ರಾಸವಿಲ್ಲ, ಭಾರತ-ಇಂಡೋನೇಷ್ಯಾಗಳ ಬಾಂಧವ್ಯದಲ್ಲೂ ಪ್ರಾಸವಿದೆ’ ಎಂದರು.
’30 ದಿನಗಳ ಕಾಲ ಭಾರತಕ್ಕೆ ಭೇಟಿಕೊಡುವ ಸಲುವಾಗಿ ಇಂಡೋನೇಷ್ಯಾ ನಾಗರಿಕರಿಗೆ ನಾನು 30 ದಿನಗಳ ಉಚಿತ ವೀಸಾವನ್ನು ಘೋಷಣೆ ಮಾಡುತ್ತೇನೆ’ ಎಂದರು.
‘ನಿಮ್ಮಲ್ಲಿ ಹೆಚ್ಚಿನವರು ಭಾರತಕ್ಕೆ ಆಗಮಿಸಿಲ್ಲ, ಮುಂದಿನ ವರ್ಷ ನಡೆಯಲಿರುವ ಪ್ರಯಾಗ್ ಕುಂಭ ಮೇಳಕ್ಕೆ ಆಗಮಿಸಿ ಅದ್ಭುತ ಅನುಭವ ಪಡೆಯಿರಿ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.