ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸಚಿವ ವಿಕೆ ಸಿಂಗ್ ಮತ್ತು ಕಾರ್ಯದರ್ಶಿ ಎಂಜೆ ಅಕ್ಬರ್ ಅವರ ಜೊತೆಗೂಡಿ ಸೋಮವಾರ ವಿದೇಶಾಂಗ ಸಚಿವಾಲಯದ 4 ವರ್ಷದ ಆಡಳಿತದ ಸಾಧನೆಗಳ ಬಗ್ಗೆ ಪುಸ್ತಕ ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಸುಷ್ಮಾ, ‘ನಮ್ಮ ನಾಯಕರು ಹೋಗದ ಹಲವಾರು ರಾಷ್ಟ್ರಗಳಿವೆ ಎಂಬುದನ್ನು ತಿಳಿದು ನಮಗೆ ಅಚ್ಚರಿಯಾಯಿತು. ಹೀಗಾಗಿ ನಾವು ವಿಶ್ವಸಂಸ್ಥೆಯಡಿ ಬರುವ 192 ದೇಶಗಳಿಗೆ ಭೇಟಿಕೊಡುವ ನಿರ್ಧಾರ ಮಾಡಿದೆವು. ಈಗಾಗಲೇ ನಾವು 186 ದೇಶಗಳ ಭೇಟಿಯನ್ನು ಪೂರ್ಣಗೊಳಿಸಿದ್ದೇವೆ’ ಎಂದಿದ್ದಾರೆ.
ವಿಶ್ವದ ನಾನಾ ಭಾಗಗಳಲ್ಲಿ ಸಿಲುಕಿದ್ದ 90 ಸಾವಿರ ಭಾರತೀಯರನ್ನು ನಾವು ರಕ್ಷಣೆ ಮಾಡಿದ್ದೇವೆ. ವಿವಿಧ ದೇಶಗಳಿಗೆ ಭೇಟಿ ನೀಡಿದ ಪ್ರಧಾನಿಗಳು ಮಾತುಕತೆ ನಡೆಸಿ ಅಲ್ಲಿ ಭಾರತೀಯರಿಗೆ ಸಿಗಬೇಕಿದ್ದ ಕಠಿಣ ಶಿಕ್ಷೆಯನ್ನು ಕಡಿಮೆಗೊಳಿಸಿದ್ದಾರೆ. ಇಂದು ವಿದೇಶದಲ್ಲಿನ ಭಾರತೀಯ ಸಮುದಾಯ ಶಾಂತಿಯಿಂದ ಬದುಕುತ್ತಿದೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.