ನವದೆಹಲಿ: ಐಎನ್ಎಸ್ವಿ ತಾರಿಣಿ ಮೂಲಕ ಯಶಸ್ವಿಯಾಗಿ ‘ನಾವಿಕ ಸಾಗರ್ ಪರಿಕ್ರಮ’ ನಡೆಸಿ ವಾಪಾಸ್ಸಾಗಿರುವ ಭಾರತೀಯ ನೌಕಾದಳದ ಮಹಿಳಾ ಸದಸ್ಯರನ್ನು ಬುಧವಾರ ಪ್ರಧಾನಿ ನರೇಂದ್ರ ಮೋದಿ ಭೇಟಿಯಾದರು.
ನೌಕಾಯಾನದ ಮೂಲಕ ಜಗತ್ತು ಸುತ್ತಿದ ದೇಶದ ಮೊದಲ ಮಹಿಳಾ ತಂಡ ಎಂಬ ಹೆಗ್ಗಳಿಕೆಗೆ ಈ ತಂಡ ಪಾತ್ರವಾಗಿದೆ.
ಮೋದಿಯನ್ನು ಭೇಟಿ ಮಾಡಿರುವ ತಂಡ, ತಮ್ಮ ಯಾತ್ರೆಯ ಅನುಭವ, ಸಿದ್ಧತೆ, ತರಬೇತಿಗಳ ಬಗ್ಗೆ ವಿವರಿಸಿದೆ.
ಮಿಶನ್ನನ್ನು ಯಶಸ್ವಿಗೊಳಿಸಿದ್ದಕ್ಕಾಗಿ ತಂಡವನ್ನು ಮೋದಿ ಅಭಿನಂದಿಸಿದ್ದಾರೆ. ನೌಕಾ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ ಈ ವೇಳೆ ಉಪಸ್ಥಿತರಿದ್ದರು.
ಲೆ.ಕಮಾಂಡರ್ ವರ್ತಿಕಾ ಜೋಶಿ, ಲೆ.ಕಮಾಂಡರ್ ಪ್ರತಿಭಾ ಜಮ್ವಾಲಾ, ಪಿ.ಸ್ವಾತಿ, ಎಸ್.ವಿಜಯ ದೇವಿ, ಬಿ.ಐಶ್ವರ್ಯ, ಪಾಯಲ್ ಗುಪ್ತಾ ತಂಡದಲ್ಲಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.