ಕೊಯಂಬತ್ತೂರಿನ ಒಳಾಂಗಣ ವಿನ್ಯಾಸಗಾರರೊಬ್ಬರು ಮರದ ಅಥವಾ ಪ್ಲೈವುಡ್ ಸೈಕಲ್ನ್ನು ವಿನ್ಯಾಸಗೊಳಿಸಿ ಇದೀಗ ಸುದ್ದಿಯಾಗಿದ್ದಾರೆ.
ಪಿಕೆ ಮುರುಗೇಸನ್ ಅವರು ತನ್ನ ಡ್ಯಾಮೇಜ್ ಆದ ಸೈಕಲ್ಗೆ ಹೊಸ ಫ್ರೇಮ್ ಹುಡುಕುತ್ತಿದ್ದರು, ಈ ಹುಡುಕಾಟವೇ ಅವರನ್ನು ವುಡನ್ ಬೈಕ್ ವಿನ್ಯಾಸಪಡಿಸಲು ಪ್ರೇರಣೆ ನೀಡಿದೆ. ಎಂಜಿನಿಯರ್ಡ್ ವುಡ್ ಅಥವಾ ಪ್ಲೈವುಡ್ ಬಳಸಿ ಅವರು ಸೈಕಲ್ ಅಭಿವೃದ್ಧಿಪಡಿಸಿದ್ದಾರೆ.
ಹ್ಯಾಂಡ್ಲೇಬರ್, ಸೀಟ್ನಂತಹ ಮುಖ್ಯ ಭಾಗಗಳನ್ನು ಹೊರತುಪಡಿಸಿ ಅವರು ಉಳಿದ ಭಾಗಗಳನ್ನು ಮರದಿಂದಲೇ ಆಧುನೀಕರಣಗೊಳಿಸಿದ್ದಾರೆ, ಇದೀಗ ಈ ಸೈಕಲ್ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.
ಪರಿಸರದ ಹಿತದೃಷ್ಟಿಯಿಂದ ಹೊಗೆಯುಗುಳುವ ವಾಹನಗಳಿಂದ ದೂರವಿದ್ದು, ಅವರು ಮರದ ಸೈಕಲ್ನ್ನು ವಿನ್ಯಾಸಪಡಿಸಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.